Friday, October 30, 2026

ಚಿಕ್ಕಮಗಳೂರು | ಯುವತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ಯುವಕನ ಕೊಲೆ

ಚಿಕ್ಕಮಗಳೂರು: ಯುವತಿಯೊಬ್ಬಳಿಗೆ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿ ಮೆಸೇಜ್ ಮಾಡಿದ ಕಾರಣಕ್ಕೆ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಉಡೇವಾ ಮೂಲದ ಮಂಜುನಾಥ್ (28) ಕೊಲೆಯಾದ ಯುವಕ. ಯುವತಿಯೊಂದಿಗೆ ವಿವಾಹ ನಿಶ್ಚಿತಾರ್ಥವಾಗಿದ್ದ ಯುವಕ ವೇಣು ಮತ್ತು ಕೊಲೆ ಆರೋಪಿಗಳು ಎಂದು ಹೇಳಲಾಗಿದೆ.

ವೇಣುವಿನ ಜೊತೆ ವಿವಾಹ ನಿಶ್ಚಿತಾರ್ಥ ಆಗಿದ್ದ ಯುವತಿಗೆ ಮಂಜುನಾಥ್ ಹುಟ್ಟುಹಬ್ಬದ ಶುಭಾಶಯ ಕೋರಿ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿದ್ದನೆನ್ನಲಾಗಿದೆ. ಈ ವಿಚಾರವಾಗಿ ವೇಣು ಮತ್ತು ಮಂಜುನಾಥ್ ಮಧ್ಯೆ ಅತ್ತಿಗನಾಳು ಗ್ರಾಮದಲ್ಲಿ ಬುಧವಾರ ಗಲಾಟೆ ನಡೆದಿದೆ. ಇದು ಅತಿರೇಕಕ್ಕೆ ತಿರುಗಿದ್ದು, ವೇಣು ಹಾಗೂ ಸ್ನೇಹಿತರು ಮಂಜುನಾಥ್ ರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ತರೀಕೆರೆ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More like this
Related

ನ. 15ರೊಳಗೆ ಉಡುಪಿ ಜಿಲ್ಲಾಸ್ಪತ್ರೆ ಲೋಕಾರ್ಪಣೆ ದಿನಾಂಕ ಪ್ರಕಟಿಸಿ: ಆರೋಗ್ಯ ಸಚಿವರಿಗೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ

ಉಡುಪಿ: ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ನೂತನ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣ...

ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಫೋಟ: ಉತ್ತರ ಬಂಗಾಳದಲ್ಲಿ ಪ್ರವಾಹ ಭೀತಿ; ನದಿ ತೀರದ ಜನರ ಸ್ಥಳಾಂತರ

ಕೋಲ್ಕತ್ತಾ: ಭೂತಾನ್‌ನ ಗಾಸಾ ಜಿಲ್ಲೆಯ ಶಿಂತಾಫು ಹಿಮನದಿ ಸರೋವರದಲ್ಲಿ ಹಠಾತ್ ನೀರು...

ಕೇರಳ ನಿಪಾ ಔಷಧಿ ವಿವಾದ: ವಿಜಯನ್ ಸರ್ಕಾರದ ಅವಧಿಯಲ್ಲಿ ಕ್ಲಿನಿಕಲ್ ಟ್ರಯಲ್ ಔಷಧಿಯನ್ನೂ ನೀಡಲಾಗಿತ್ತೇ?

ಕೋಯಿಕ್ಕೋಡ್: ಕೇರಳದಲ್ಲಿ ನಿಪಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಹಿಂದಿನ ಮುಖ್ಯಮಂತ್ರಿ...

ರಸಗೊಬ್ಬರ ಬೆಲೆ ಏರಿಕೆಯ ಹೊರೆ ರೈತರ ಮೇಲೆ ಬೀಳದಂತೆ ₹16 ಲಕ್ಷ ಕೋಟಿ ಸಬ್ಸಿಡಿ ನೀಡಲಾಗಿದೆ: ಪ್ರಧಾನಿ ಮೋದಿ

ಭಿಲ್ಡಿ (ಗುಜರಾತ್): ಜಾಗತಿಕ ಅನಿಶ್ಚಿತತೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ...

Copying is disabled on Udupi Digital News.