Thursday, May 14, 2026

ಚಿನ್ನ ಖರೀದಿ ಬೇಡ ಎಂದ ಇಂದಿರಾ ಗಾಂಧಿ ಹೇಳಿಕೆಯ ಫೋಟೋ ನಕಲಿ! ನಮ್ಮದಲ್ಲ ಎಂದ ಮಾಧ್ಯಮ ಸಂಸ್ಥೆ; ಬಿಜೆಪಿ ನಾಯಕರಿಗೆ ಮುಖಭಂಗ

ಪ್ರಧಾನಿ ಮೋದಿಯವರ ‘ಚಿನ್ನ ಖರೀದಿಸಬೇಡಿ’ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿತ್ತು. ಇದಕ್ಕೆ ತಿರುಗೇಟು ನೀಡಲು ಬಿಜೆಪಿ ನಾಯಕರು, 1967ರಲ್ಲಿ ಇಂದಿರಾ ಗಾಂಧಿ ಕೂಡ ಇದೇ ಮನವಿ ಮಾಡಿದ್ದರು ಎಂಬ ‘ದಿ ಹಿಂದೂ’ ಪತ್ರಿಕೆಯ ಮುಖಪುಟವನ್ನು ವೈರಲ್ ಮಾಡಿದ್ದರು. ಆದರೆ, ಈ ಪೋಸ್ಟರ್ ‘ನಕಲಿ’ ಎಂದು ಸ್ವತಃ ‘ದಿ ಹಿಂದೂ’ ಸ್ಪಷ್ಟಪಡಿಸಿದ್ದು, ಸತ್ಯಾಸತ್ಯತೆ ಪರಿಶೀಲಿಸದೆ ಸುಳ್ಳು ಸುದ್ದಿ ಹಂಚಿಕೊಂಡಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಬೆಂಗಳೂರು: ಚಿನ್ನ ಖರೀದಿಸ ಬೇಡಿ ಎಂಬ ಇಂದಿರಾ ಗಾಂಧಿ ಹೇಳಿಕೆ ಇರುವ 1967 ರ ಪತ್ರಿಕೆಯ ಮುಖಪುಟದ ಫೋಟೋ ವೈರಲ್‌ ಆಗಿತ್ತು. ಕರ್ನಾಟಕ ಸೇರಿದಂತೆ ದೇಶಾದ್ಯಂತ ಬಿಜೆಪಿ ನಾಯಕರು ಕಾರ್ಯಕರ್ತರು ಈ ಫೋಟೋವನ್ನು ಹಂಚಿಕೊಂಡು ಮೋದಿ ಹೇಳಿಕೆ ವಿರೋದಿಸುತ್ತಿರುವ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದರು. ಸದ್ಯ ಈ ವೈರಲ್‌ ಆಗಿರುವ ಈ ಫೋಟೋ ನಕಲಿ ಎಂದು ಅಧಿಕೃತ ಸುದ್ದಿ ಸಂಸ್ಥೆ ಹೇಳಿದೆ.

ಪ್ರಧಾನಿ ಮೋದಿಯವರು ಸದ್ಯ ಚಿನ್ನ ಖರೀದಿಸಬೇಡಿ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಮೋದಿಯಿಂದ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಕಾಂಗ್ರೆಸ್‌ ನಾಯಕರು ತೀವ್ರ ಟೀಕೆ ಮಾಡಿದ್ದರು.

ಈ ಬೆನ್ನಲ್ಲೆ ಬಿಜೆಪಿ ನಾಯಕರಿಗೆ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ನೀಡಿದ್ದರು ಎನ್ನಲಾದ ಹೇಳಿಕೆಯ ದಿ ಹಿಂದೂ ಪತ್ರಿಕಾ ವರದಿ ಸಿಕ್ಕಿತ್ತು. ಅದರಲ್ಲಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ, ಸದ್ಯ ಚಿನ್ನ ಖರೀದಿಸಿ ಬೇಡಿ ಎಂದು ಮನವಿ ಮಾಡಿದ್ದಾಗಿ ಉಲ್ಲೇಖವಿತ್ತು. ಕೂಡಲೇ ಇದನ್ನು ಅಸ್ತ್ರವಾಗಿ ತೆಗೆದುಕೊಂಡ ಬಿಜೆಪಿ ನಾಯಕರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೋದಿ ಹೇಳಿಕೆಗೆ ಲೇವಡಿ ಮಾಡಿದ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದರು.

ಈ ಪತ್ರಿಕೆ ಪೋಸ್ಟರ್‌ ಬಗ್ಗೆ ದಿ ಹಿಂದೂ ಪ್ರತಿಕ್ರಿಯೆ ನೀಡಿದೆ. ” ಜೂನ್ 6, 1967 ರಂದು ‘ದಿ ಹಿಂದೂ’ ಪತ್ರಿಕೆಯ ಮುಖಪುಟ ಎಂದು ಹೇಳಲಾದ ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾದ ಚಿತ್ರವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ನಮ್ಮ ಆರ್ಕೈವ್‌ಗಳಿಂದ ಬಂದ ಅಧಿಕೃತ ಪುಟವಲ್ಲ. ಈ ಬಗ್ಗೆ ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ‘ದಿ ಹಿಂದೂ’ ಓದುಗರು ಹಂಚಿಕೊಳ್ಳುವ ಮೊದಲು ಎಚ್ಚರಿಕೆಯಿಂದಿರಬೇಕು ಮತ್ತು ಪರಿಶೀಲಿಸಬೇಕು ” ಎಂದು ಟ್ವೀಟ್‌ ಮಾಡಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ‘ದಿ ಹಿಂದೂ’ ಪತ್ರಿಕೆಯ ಪತ್ರಕರ್ತ ಬಿ. ಕೊಳಪ್ಪನ್, “ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಜೂನ್ 6, 1967 ರಂದು ಪ್ರಕಟವಾದ ದಿ ಹಿಂದೂ ಪತ್ರಿಕೆಯ ಮುಖಪುಟವನ್ನು ಡಿಜಿಟಲ್ ಆಗಿ ತಿರುಚಲಾದ ನಕಲಿ ಚಿತ್ರ. ಆ ದಿನ ಪ್ರಕಟವಾದ ಅಸಲಿ ಮುಖಪುಟ ಬೇರೆಯೇ ಇದೆ. ಭಾರತದ ರಾಷ್ಟ್ರೀಯ ಆಂಗ್ಲ ದಿನಪತ್ರಿಕೆಯ ಮುಖಪುಟವನ್ನೇ ಬದಲಾಯಿಸುವಷ್ಟು ಸಾಮಾಜಿಕ ಜಾಲತಾಣಗಳು ಎಂತಹ ಕೆಲಸವನ್ನಾದರೂ ಮಾಡಬಲ್ಲವು ಎಂಬುದಕ್ಕೆ ಇದೇ ಸಾಕ್ಷಿ” ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ನಾಯಕರು ಟೀಕಿಸುವ ಬರದಲ್ಲಿ ಸತ್ಯಾಂಶವನ್ನು ಪರಿಶೀಲನೆ ಮಾಡದೇ ಇಂದಿರಾ ಗಾಂಧಿಯವರ ಕುರಿತು ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಕರ್ನಾಟಕ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಅವರು ಈ ನಕಲಿ ಪೋಸ್ಟರ್‌ ಹಂಚಿಕೊಂಡು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಕಾಂಗ್ರೆಸ್ಸಿಗರ ಆರ್ಥಿಕ ಅಜ್ಞಾನ ಮತ್ತು ಅಂಧ ವಿರೋಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಇತಿಹಾಸದ ಅರಿವೂ ಇಲ್ಲದ, ಆರ್ಥಿಕ ನಿರ್ವಹಣೆಯ ಗಂಧ-ಗಾಳಿಯೂ ಗೊತ್ತಿಲ್ಲದ ಇಂದಿನ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯನ್ನೂ ವಿರೋಧಿಸುವುದೇ ಒಂದು ‘ನಿತ್ಯ ಕಾಯಕ’ವಾಗಿಬಿಟ್ಟಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ನೀಡುವ ದೂರದೃಷ್ಟಿಯ ಆರ್ಥಿಕ ಸಲಹೆಗಳನ್ನು ಲೇವಡಿ ಮಾಡುವ ಈ ಕಾಂಗ್ರೆಸ್ಸಿಗರು ಒಮ್ಮೆ ತಮ್ಮದೇ ಪಕ್ಷದ ಇತಿಹಾಸವನ್ನು ತಿರುವಿ ಹಾಕಲಿ. 1967 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ ‘ಚಿನ್ನ ಕೊಳ್ಳಬೇಡಿ’ ಎಂದು ಜನರಲ್ಲಿ ಮನವಿ ಮಾಡಿದ್ದರು. ‘ದೊರೆ ಮಾಡಿದರೆ ದಂಡವಿಲ್ಲ’ ಎಂಬಂತೆ, ಇಂದಿರಾ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರ ಕಾಲದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರಗಳು ಕರೆ ನೀಡಿದರೆ ಅದು “ಆರ್ಥಿಕ ನೀತಿ”. ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ಕರೆ ನೀಡಿದರೆ ಅದು ಇವರಿಗೆ ತಪ್ಪಾಗಿ ಕಾಣುತ್ತಿರುವುದು ಕಾಂಗ್ರೆಸ್ ನಾಯಕರ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ. ಕೇವಲ ರಾಜಕೀಯ ಕಾರಣಕ್ಕಾಗಿ ದೇಶದ ಆರ್ಥಿಕತೆಯ ಬಗ್ಗೆ ಯಾವುದೇ ತರ್ಕವಿಲ್ಲದೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಆರ್ಥಿಕತೆಯ ಮೂಲಪಾಠಗಳನ್ನು ಕಲಿಯಲಿ. ಮೋದಿಯವರನ್ನು ವಿರೋಧಿಸುವ ಭರದಲ್ಲಿ ದೇಶದ ಹಿತವನ್ನು ಬಲಿ ಕೊಡಬೇಡಿ ” ಎಂದು ಟ್ವೀಟ್‌ ಮಾಡಿದ್ದರು.

More like this
Related

ಕೇರಳ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು: ವಿಡಿ ಸತೀಶನ್ ಅಥವಾ ಕೆಸಿ ವೇಣುಗೋಪಾಲ್? ಇಂದು ಅಂತಿಮ ತೆರೆ!

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಆಯ್ಕೆ ಸಂಬಂಧ ಹಲವು ದಿನಗಳಿಂದ ನಡೆಯುತ್ತಿರುವ ಆಂತರಿಕ...

ಹಿಜಾಬ್ ನಿಷೇಧ ಹಿಂಪಡೆಯುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಇಸ್ಲಾಮೀಕರಣ ಮಾಡಲು ಮುಂದಾದ ರಾಜ್ಯ ಸರ್ಕಾರ : ಯಶ್ ಪಾಲ್ ಸುವರ್ಣ ಆಕ್ರೋಶ

ಉಡುಪಿ: ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ರಾಜ್ಯ ಕಾಂಗ್ರೆಸ್...

 ಕುಂದಾಪುರ: ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸರ್ಕಾರಿ ಜಾಗ ಮಂಜೂರು: ಸಿಪಿಐ(ಎಂ) ಆಕ್ಷೇಪ

ಕುಂದಾಪುರ: ನಗರದ ಬೋರ್ಡ್ ಹೈಸ್ಕೂಲ್ ಪಕ್ಕದಲ್ಲಿರುವ ಪುರಸಭೆಗೆ ಸೇರಿದ ಜಾಗ ಸರ್ವೇ...

ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅನುಮತಿ; ಇತರೆ ಧಾರ್ಮಿಕ ವಸ್ತ್ರಕ್ಕೂ ಅವಕಾಶ: ಸಚಿವ ಮಧು ಬಂಗಾರಪ್ಪ ಘೋಷಣೆ

ಬೆಂಗಳೂರು: ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ...

Copying is disabled on Udupi Digital News.