Tuesday, September 15, 2026

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ: 48 ಮಂದಿ ಐಪಿಎಸ್ ಅಧಿಕಾರಿಗಳಿಗೆ ಮುಂಭಡ್ತಿ

ಬೆಂಗಳೂರು: ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ರಾಜ್ಯದ 48 ಮಂದಿ ಐಪಿಎಸ್ ಅಧಿಕಾರಿಗಳಿಗೆ ಮುಂಭಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು(ಎಸ್ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಲಾಗಿದೆ.

ದಕ್ಷಿಣ ವಲಯ (ಮೈಸೂರು ) ಐಜಿಪಿಯಾಗಿ ಡಾ.ಎಂ.ಬಿ.ಬೋರಲಿಂಗಯ್ಯ, ಬೆಂಗಳೂರು ಅಪರಾಧ ವಿಭಾಗದ ಐಜಿಪಿ ಮತ್ತು ಅಪರ ಆಯುಕ್ತರಾಗಿ ಅಜಯ್ ಹಿಲೋರಿ, ಸಿಐಡಿಯ(ಆರ್ಥಿಕ ಅಪರಾಧಗಳು) ಡಿಐಜಿಯಾಗಿ ಡಾ.ಭೀಮಾಶಂಕರ್ ಗುಳೇದ್, ಕರ್ನಾಟಕ ಲೋಕಾಯುಕ್ತದ ಡಿಐಜಿಯಾಗಿ ಡಿ.ಆರ್.ಸಿರಿಗೌರಿ ಅವರಿಗೆ ಮುಂಭಡ್ತಿ ನೀಡಲಾಗಿದೆ. ಬಿಎಂಟಿಸಿ(ಭದ್ರತೆ ಮತ್ತು ಜಾಗೃತ) ನಿರ್ದೇಶಕ ಮಂಗಳೂರು ಮೂಲದ ಅಬ್ದುಲ್ ಅಹದ್ ಅವರನ್ನು ಡಿಐಜಿಯಾಗಿ ಭಡ್ತಿ ನೀಡಿ ಸದರಿ ಹುದ್ದೆಯನ್ನು ಮೇಲ್ದರ್ಜೇಗೇರಿಸಲಾಗಿದೆ.

ಕೆಎಸ್‍ಆರ್ಪಿ ಡಿಐಜಿಯಾಗಿ ಸಿ.ಕೆ.ಬಾಬಾ, ಆ್ಯಂಟಿ ನಾರ್ಕೋಟಿಕ್ ಟಾಸ್ಕ್ ಫೋರ್ಸ್‍ನ ಡಿಐಜಿಯಾಗಿ ಎಸ್.ಗಿರೀಶ್, ರೈಲ್ವೇಸ್‍ನ ಡಿಐಜಿಯಾಗಿ ಜೆ.ಕೆ.ರಶ್ಮಿ, ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದ ಡಿಐಜಿಯಾಗಿ ಟಿ.ಪಿ.ಶಿವಕುಮಾರ್ ಅವರಿಗೆ ಮುಂಭಡ್ತಿ ನೀಡಿ ಆದೇಶಿಸಲಾಗಿದೆ.

ರೈಲ್ವೇಸ್‍ನ ಎಸ್ಪಿಯಾಗಿ ಸಾರಾ ಫಾತಿಮಾ, ಮಂಡ್ಯ ಎಸ್ಪಿಯಾಗಿ ಡಾ.ವಿ.ಜೆ.ಶೋಭಾರಾಣಿ, ಚಿಕ್ಕಮಗಳೂರು ಎಸ್ಪಿಯಾಗಿ ಜಿತೇಂದ್ರ ಕುಮಾರ್ ದಯಾಮಾ, ಹಾಸನ ಎಸ್ಪಿಯಾಗಿ ಶುಭನ್ವಿತಾ, ಕೋಲಾರ ಎಸ್ಪಿಯಾಗಿ ಕನ್ನಿಕಾ ಸಿಕ್ರಿವಾಲ್, ಕೊಡಗು ಎಸ್ಪಿಯಾಗಿ ಆರ್.ಎನ್.ಬಿಂದುಮಣಿ, ಬಳ್ಳಾರಿ ಎಸ್ಪಿಯಾಗಿ ಪವನ್ ನೆಜ್ಜೂರು, ಚಾಮರಾಜನಗರದ ಎಸ್ಪಿಯಾಗಿ ಎಂ.ಮುತ್ತುರಾಜು, ರಾಯಚೂರು ಎಸ್ಪಿಯಾಗಿ ಅರುಣಾಂಶು ಗಿರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿಯಾಗಿ ಎಂ.ವಿ.ಚಂದ್ರಕಾಂತ್, ಶಿವಮೊಗ್ಗ ಎಸ್ಪಿಯಾಗಿ ಬಿ.ನಿಖಿಲ್, ಮೈಸೂರು ಎಸ್ಪಿಯಾಗಿ ಮಲ್ಲಿಕಾರ್ಜುನ ಬಾಲದಂಡಿ, ಬೆಳಗಾವಿ ಎಸ್ಪಿಯಾಗಿ ಕೆ.ರಾಮಾನುಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ.

More like this
Related

ಕಂಡ್ಲೂರು ಹಳೆ ಸೇತುವೆ ನೆಲಸಮದ ಹುನ್ನಾರದ ಹಿಂದೆ ಭ್ರಷ್ಟಾಚಾರದ ಅನುಮಾನ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ ತೀರ್ಥಹಳ್ಳಿ ಸಂಪರ್ಕ ಮಾಡುವ ರಾಜ್ಯ ಹೆದ್ದಾರಿ ಹಾದು ಹೋಗುವ ವರಾಹಿ...

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರ ಪಾಣಿಯಾಗಿ ಜನಾರ್ದನ್ ಕೊಡವೂರು ನೇಮಕ

ಉಡುಪಿ: ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ...

ಇತರರಿಗೆ ಸಹಾಯ ಮಾಡುವ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಬಹುದು : ಬಿಷಪ್ ಲೆಸ್ಲಿ ಸಿ ಡಿಸೋಜಾ

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ...

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ಆಘಾತಕಾರಿ ಫಲಿತಾಂಶ: ಹೆಂಡತಿ, ಅಪ್ಪ, ಅಮ್ಮನ ವೋಟ್ ಯಾರಿಗೆ?

ಜೈಪುರ: ರಾಜಸ್ಥಾನ ನಾಗರಿಕ ಚುನಾವಣೆಯ ಫಲಿತಾಂಶದ ನಡುವೆ ಆಘಾತಕಾರಿ ಮತ್ತು ಆಸಕ್ತಿದಾಯಕ...

Copying is disabled on Udupi Digital News.