ಉಡುಪಿ: ಎಜಿಆರ್‌ಐ ಗೋಲ್ಡ್ (AGRI GOLD) ಬಾಂಡ್ ಹೊಂದಿರುವವರಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಮುಂದುವರಿದಿದ್ದು, ಮುನಿಯಾಲು, ಹೆಬ್ರಿ ಹಾಗೂ ಅಜೆಕಾರು ಗ್ರಾಮಗಳ ಒಟ್ಟು 150 ಬಾಂಡ್‌ದಾರರಿಗೆ ಈಗಾಗಲೇ ಟೋಕನ್ ವಿತರಿಸಲಾಗಿದೆ. ಇವರ ದಾಖಲೆಗಳ ಪರಿಶೀಲನೆಯು ನವೆಂಬರ್ 4ರಂದು ನಡೆಯಲಿದೆ.

ಉಡುಪಿ ತಾಲೂಕಿನ ಹೂಡೆ, ಕೆಮ್ಮಣ್ಣು ಹಾಗೂ ಸಂತೆಕಟ್ಟೆ ಗ್ರಾಮಗಳ ಎಜಿಆರ್‌ಐ ಗೋಲ್ಡ್ ಬಾಂಡ್ ಹೊಂದಿರುವವರಿಗೆ ನವೆಂಬರ್ 4ರಂದು ಟೋಕನ್ ವಿತರಿಸಲಾಗುವುದು. ಮೊದಲು ಆಗಮಿಸುವ 100 ಮಂದಿಗೆ ಆದ್ಯತೆ ನೀಡಲಾಗುತ್ತಿದ್ದು, ಇವರ ದಾಖಲೆಗಳ ಪರಿಶೀಲನೆಯು ನವೆಂಬರ್ 5ರಂದು ನಡೆಯಲಿದೆ.
ಉಳಿದ ಗ್ರಾಮಗಳ ಎಜಿಆರ್‌ಐ ಗೋಲ್ಡ್ ಬಾಂಡ್ ಹೊಂದಿರುವವರು ಪರಿಶೀಲನೆಗೆ ಹಾಜರಾಗಬೇಕಾದ ಮುಂದಿನ ದಿನಾಂಕವನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣಗಳು ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 0820-2526444 ಸಂಖ್ಯೆಯನ್ನು ಸಂಪರ್ಕಿಸಬಹುದು. ಸಂಪರ್ಕ ಸಮಯ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.




