ಉಡುಪಿ ಎಸ್ಪಿ ಕಚೇರಿಯಲ್ಲಿ ಪರಿಶೀಲನೆ; ಪ್ರತಿದಿನ ಮೊದಲ 150 ಮಂದಿಗೆ ಮಾತ್ರ ಟೋಕನ್ ವಿತರಣೆ
ಉಡುಪಿ: ಅಗ್ರಿಗೋಲ್ಡ್ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಗ್ರಾಹಕರ ಬಾಂಡ್ಗಳ ಪರಿಶೀಲನೆಗಾಗಿ ಆಂಧ್ರಪ್ರದೇಶದ ಸಿಐಡಿ/ಸಿಒಡಿ ಅಧಿಕಾರಿಗಳು ದಿನಾಂಕಗಳನ್ನು ನಿಗದಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಬ್ರಿ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಬಾಂಡ್ ಹೊಂದಿರುವ ಗ್ರಾಹಕರು ತಮ್ಮ ಮೂಲ ಬಾಂಡ್ಗಳೊಂದಿಗೆ ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ನಿಗದಿತ ದಿನಾಂಕದಂದು ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.
ಪರಿಶೀಲನೆಗಾಗಿ ನಿಗದಿಪಡಿಸಿರುವ ದಿನಾಂಕಗಳ ವಿವರ ಹೀಗಿದೆ:
ಅಕ್ಟೋಬರ್ 29: ಹೆಬ್ರಿ ತಾಲೂಕಿನ ಎಲ್ಲ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿರುವ ಗ್ರಾಹಕರಿಗೆ.
ಅಕ್ಟೋಬರ್ 30: ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ ಬಾಂಡ್ ಹೊಂದಿರುವ ಗ್ರಾಹಕರಿಗೆ.
ಅಕ್ಟೋಬರ್ 31: ಅಜೆಕಾರು ಹಾಗೂ ಆಸುಪಾಸಿನ ಗ್ರಾಮಗಳ ಬಾಂಡ್ ಹೊಂದಿರುವ ಗ್ರಾಹಕರಿಗೆ.
ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಟೋಕನ್ ವಿತರಣೆ ಆರಂಭವಾಗಲಿದ್ದು, ಮೊದಲು ಆಗಮಿಸುವ 150 ಗ್ರಾಹಕರಿಗೆ ಮಾತ್ರ ಟೋಕನ್ ನೀಡಲಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಗ್ರಾಹಕರು ತಮ್ಮ ವ್ಯಾಪ್ತಿಗೆ ನಿಗದಿಪಡಿಸಿದ ದಿನಾಂಕದಂದು ಮಾತ್ರ ಹಾಜರಾಗುವಂತೆ ಸೂಚಿಸಲಾಗಿದೆ.
ಅಂಗವೈಕಲ್ಯ, ಅನಾರೋಗ್ಯ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಸ್ವತಃ ಹಾಜರಾಗಲು ಸಾಧ್ಯವಾಗದ ಗ್ರಾಹಕರ ಪರವಾಗಿ ಅವರ ಏಜೆಂಟ್ಗಳು ಅಥವಾ ಸಂಬಂಧಿಕರು ಬಾಂಡ್ಗಳನ್ನು ತಂದು ಸಲ್ಲಿಸಬಹುದು. ಅಶಕ್ತರು, ಗರ್ಭಿಣಿಯರು ಹಾಗೂ ವೈದ್ಯಕೀಯ ಸಮಸ್ಯೆ ಹೊಂದಿರುವ ಗ್ರಾಹಕರು ಸಂಬಂಧಿತ ವೈದ್ಯಕೀಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಸೂಚಿಸಲಾಗಿದೆ.
ನವೆಂಬರ್ 1ರಂದು ರಜೆ ಇರುವುದರಿಂದ ಅಂದು ಪರಿಶೀಲನೆ ನಡೆಯುವುದಿಲ್ಲ. ನವೆಂಬರ್ 2ರಿಂದ ಯಾವ ತಾಲೂಕು ಅಥವಾ ಜಿಲ್ಲೆಯ ಗ್ರಾಹಕರಿಗೆ ಪರಿಶೀಲನೆ ನಡೆಸಲಾಗುತ್ತದೆ ಎಂಬ ವಿವರವನ್ನು ಅಕ್ಟೋಬರ್ 31ರ ಸಂಜೆಯೊಳಗೆ ತಿಳಿಸಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 29, 30 ಮತ್ತು 31ರಂದು ಹೆಬ್ರಿ ತಾಲೂಕಿನ ಗ್ರಾಹಕರಿಗೆ ಮಾತ್ರ ಹಾಜರಾಗಲು ಅವಕಾಶವಿದ್ದು, ಈ ದಿನಗಳಲ್ಲಿ ಪರಿಶೀಲನೆಗೆ ಬಂದು ಉಳಿದ ಗ್ರಾಹಕರಿಗೆ ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 0820-2526444 ಅಥವಾ 9480805400 ಸಂಖ್ಯೆಯನ್ನು ಸಂಪರ್ಕಿಸಬಹುದು. ಸಂಬಂಧಪಟ್ಟ ಗ್ರಾಹಕರು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದಂದು ಹಾಜರಾಗಿ ಪರಿಶೀಲನಾ ಪ್ರಕ್ರಿಯೆಗೆ ಸಹಕರಿಸುವಂತೆ ಸೂಚಿಸಲಾಗಿದೆ.




