Tuesday, September 22, 2026

ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ವಲಯ ವಾರ್ಷಿಕ ಮಹಾಸಭೆ

ಉಡುಪಿ: ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಜಿಲ್ಲೆ ಇದರ ಉಡುಪಿ ವಲಯದ 15ನೇ ವಾರ್ಷಿಕ ಮಹಾಸಭೆಯ ಕುಮಾರ್ ಎಸ್ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಯುಬಿಎಂಸಿ ಹಾಲ್ ಉಡುಪಿಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಉಡುಪಿ ವಲಯದ 4 ಹಿರಿಯ ಸದಸ್ಯರಾದ ಪ್ರಕಾಶ್ ಕುಲಾಲ್, ಅಬ್ದುಲ್ ಸಮದ್, ಪೀಟರ್ ಡಿಸೋಜಾ ಹಾಗೂ ಸದಾಶಿವ ಆಚಾರ್ಯರನ್ನು ಗೌರವಿಸಲಾಯಿತು. ಸಂಘಟನೆಯ ಮಹಾಲಕ್ಷ್ಮೀ ವಿದ್ಯಾನಿಧಿಯಿಂದ 16 ಮಕ್ಕಳಿಗೆ ಧನಸಹಾಯ ನೀಡಿ ಪ್ರೋತ್ಸಾಹಿಸಲಾಯಿತು.

ಸಮಾಜಸೇವೆಯನ್ನು ತಮ್ಮನ್ನು ಸಂಪೂರ್ಣವಾಗಿ ಮುಡಿಪಾಗಿಟ್ಟ ನಿತ್ಯಾನಂದ ಒಳಕಾಡು ಅವರಿಗೆ ಸಂಘಟನೆಯ ವತಿಯಿಂದ ಗೌರವಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ನಿತ್ಯಾನಂದ ಒಳಕಾಡು ಸಮಾಜ ಸೇವೆಯನ್ನು ಸಂಘಟನೆ ಗುರುತಿಸಿರುವುದಕ್ಕೆ ಧನ್ಯವಾದ ಸಲ್ಲಿಸಿದ ಅವರು ಜನಸೇವೆಗೆ 24 ಗಂಟೆಯೂ ಸದಾ ಮುಡಿಪಾಗಿಡುವೆ ಎಂದು ಹೇಳಿದರು.

ಸಂಘಟನೆಯು ನಿರ್ವಹಿಸಿದ ಕ್ರಿಕೆಟ್ ಕ್ರೀಡಾಕೂಟದ ಟ್ರೋಫಿಯನ್ನು ಸಮಾಜಸೇವಕ ಹಾಗೂ ಪ್ರಾಯೋಜಕರಾದ ಕೃಷ್ಣ ಮೂರ್ತಿ ಆಚಾರ್ಯ ವಿತರಿಸಿದರು.

ಈ ವೇಳೆ ಮಾತನಾಡಿದ ಕೃಷ್ಣ ಮೂರ್ತಿ ಆಚಾರ್ಯ ಧ್ವನಿ ಬೆಳಕು ಸಂಘಟನೆ ಇತರ ಸಂಘಟನೆಗಳಿಗಿಂತ ವಿಭಿನ್ನವಾಗಿದ್ದು ಸಮಾಜಮುಖಿ ಕಾರ್ಯಗಳಿಗೂ ಪ್ರಾತಿನಿಧ್ಯತೆ ನೀಡುತ್ತಿದ್ದು ನಿಮ್ಮೊಂದಿಗೆ ಸದಾ ಇರುವುದಾಗಿ ಶುಭ ಹಾರೈಸಿದರು.

ವಲಯದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಡೊನ್ ಡಿಸೋಜಾ ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ಪ್ರಕಾಶ್ ಮಂಡಿಸಿದರು. ಜಿಲ್ಲಾಧ್ಯಕ್ಷ ಸತೀಶ್ ಶುಭ ಹಾರೈಸಿದರು.

ಪ್ರಕಾಶ್ ನಾಯ್ಕ ಸ್ವಾಗತಿಸಿ, ಸಂತೋಷ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡೋನ್ ಡಿಸೋಜಾ ವಂದಿಸಿ ಶಾಂತರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

More like this
Related

5 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬಜಪೆ ಠಾಣೆ ಇನ್ಸ್‌ಪೆಕ್ಟರ್ ಬಾಲಕೃಷ್ಣ!

ಮಂಗಳೂರು: ಲಂಚದ ಹಣ ಸ್ವೀಕರಿಸುತ್ತಿದ್ದಾಗ ಮಂಗಳೂರಿನ ಬಜಪೆ ಠಾಣೆ ಇನ್ಸ್‌ಪೆಕ್ಟರ್ ಬಾಲಕೃಷ್ಣ...

ಸೆ. 25ರಂದು ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ

ಉಚ್ಚಿಲ: ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮೊಗವೀರ ಸಮಾಜದ...

ಬಿಹಾರದ ಜಮುಯಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ವೈರಲ್ ವಿಡಿಯೋ ಬಳಿಕ ಇಬ್ಬರ ಬಂಧನ

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್ ತರಗತಿ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ತೆರಳುತ್ತಿದ್ದ...

ಏಳು ದಿನಗಳ ರಾಜ ದರ್ಬಾರ್‌ಗೆ ತೆರೆ: ಭಕ್ತಿಭಾವದ ನಡುವೆ ಉಡುಪಿಯ ರಾಜನಿಗೆ ಬೀಳ್ಕೊಡುಗೆ

ಉಡುಪಿ: ಏಳು ದಿನಗಳ ಕಾಲ ಕಡಿಯಾಳಿಯಲ್ಲಿ ರಾಜ ದರ್ಬಾರ್ ನಡೆಸಿ ಸಾವಿರಾರು...

Copying is disabled on Udupi Digital News.