Tuesday, May 12, 2026

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆಗೆ ಮುನ್ನವೇ ಅಸಮಾಧಾನ ಸ್ಫೋಟ

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಗೆ ಆಹ್ವಾನ ಇಲ್ಲದ ವಿಚಾರಕ್ಕೆ ಕಾರ್ಯಕರ್ತರ ಆಕ್ರೋಶ

ಕುಂದಾಪುರ: ಬುಧವಾರ ನಡೆಯಲಿರುವ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮದ ಸುತ್ತ ಕಾಂಗ್ರೆಸ್ ವಲಯದಲ್ಲೇ ರಾಜಕೀಯ ಅಸಮಾಧಾನ ಭುಗಿಲೆದ್ದಿದೆ. ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವ ವಿಚಾರ ಇದೀಗ ಕಾರ್ಯಕರ್ತರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕುಂದಾಪುರದ ಜ್ಯೂನಿಯರ್ ಕಾಲೇಜು ಸಮೀಪದಲ್ಲಿರುವ ಪಕ್ಷದ ಜಾಗದಲ್ಲಿ ನೂತನ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಶಂಕುಸ್ಥಾಪನೆ ನಡೆಯಲಿದ್ದು, ಸಣ್ಣ ನೀರಾವರಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆದರೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲೆಯ ಹಲವು ಕಾಂಗ್ರೆಸ್ ನಾಯಕರ ಫೋಟೋಗಳನ್ನು ಪ್ರಕಟಿಸಿರುವುದರ ನಡುವೆಯೂ, ಹಿರಿಯ ನಾಯಕ ಗೋಪಾಲ ಪೂಜಾರಿ ಅವರ ಫೋಟೋ ಅಥವಾ ಹೆಸರು ಇಲ್ಲದಿರುವುದು ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ರೈತ ಮುಖಂಡ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “1999ರಿಂದ ಕುಂದಾಪುರ ಭಾಗದ ಕಾಂಗ್ರೆಸ್ ಸಂಘಟನೆಗೆ ಗೋಪಾಲ ಪೂಜಾರಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಪುರಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಕಾರ್ಯಕರ್ತರಿಗೆ ಅವರು ಸದಾ ಬೆಂಬಲವಾಗಿ ನಿಂತಿದ್ದರು. ಟಿಎಪಿಸಿಎಂಎಸ್, ಭೂ ಅಭಿವೃದ್ಧಿ ಬ್ಯಾಂಕ್ ಹಾಗೂ ತಾಲೂಕು ಗ್ಯಾರಂಟಿ ಸಮಿತಿ ಸೇರಿದಂತೆ ಹಲವು ರಾಜಕೀಯ ಸಮೀಕರಣಗಳಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ,” ಎಂದು ಹೇಳಿದ್ದಾರೆ.

ಇಂತಹ ಹಿರಿಯ ನಾಯಕರನ್ನು ಕಾರ್ಯಕ್ರಮದಿಂದ ದೂರವಿಡುವ ಕ್ರಮ ಉದ್ದೇಶಪೂರ್ವಕವಾಗಿದೆ ಎಂದು ಆರೋಪಿಸಿರುವ ಅವರು, “ಗೋಪಾಲ ಪೂಜಾರಿ ಅವರನ್ನು ಆಹ್ವಾನಿಸದಿದ್ದರೂ ಅವರ ಗೌರವ ಕಡಿಮೆಯಾಗುವುದಿಲ್ಲ. ಆದರೆ ಕುಂದಾಪುರ ಕಾಂಗ್ರೆಸ್‌ನ ಕೆಲ ತಥಾಕಥಿತ ನಾಯಕರ ಬಿಲ್ಲವ ವಿರೋಧಿ ಮನೋಭಾವ ಮತ್ತೊಮ್ಮೆ ಬಹಿರಂಗವಾಗಿದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನವೇ ಕಾಂಗ್ರೆಸ್ ನೊಳಗೆ ಅಸಮಾಧಾನ ಬಹಿರಂಗವಾಗಿದ್ದು, ಇದು ಇನ್ನಷ್ಟು ಹೊಸ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

More like this
Related

ಬೆಂಗಳೂರು | ಶೆಡ್‍ನಲ್ಲಿ ಅಗ್ನಿ ಅವಘಡ: ಇಬ್ಬರು ಮಕ್ಕಳು ಸಜೀವ ದಹನ

ಬೆಂಗಳೂರು : ಶೆಡ್‍ವೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು...

ಕುಂದಾಪುರ ಬಿಜೆಪಿಯ ರಾಜಕೀಯ ದಿವಾಳಿತನದ ಪ್ರದರ್ಶನ – ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಸುಮಾರು 60 ವರ್ಷಗಳ ಕಾಲ ಈ ದೇಶವನ್ನು ಆಳಿದ್ದ, ಭಾರತದ...

ಟಿಡಿ ರಾಜೇಗೌಡರಿಗೆ ರಿಲೀಫ್ : ಶೃಂಗೇರಿ ವಿಧಾನಸಭಾ ಕ್ಷೇತ ಮತ ಮರು ಎಣಿಕೆ ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ!

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ...

ರಾಜಸ್ಥಾನ ಜಲ ಜೀವನ ಮಿಷನ್ ಹಗರಣ: ದೆಹಲಿ ವಿಮಾನ ನಿಲ್ದಾಣದಲ್ಲಿ ಸಂಜಯ್ ಬಡಾಯ ಬಂಧನ;

ಜೈಪುರ: ರಾಜಸ್ಥಾನದ ಬಹುಕೋಟಿ ರೂಪಾಯಿ ಮೌಲ್ಯದ ಜಲ ಜೀವನ ಮಿಷನ್ (JJM)...

Copying is disabled on Udupi Digital News.