Sunday, November 8, 2026

ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಎಣ್ಣೆ ಶಾಸ್ತ್ರ, ತೈಲಾಭ್ಯಂಜನ

ಉಡುಪಿ: ದೀಪಾವಳಿ ಹಬ್ಬದ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಶೀರೂರು ಮಠದಲ್ಲಿ ಎಣ್ಣೆ ಶಾಸ್ತ್ರ ಹಾಗೂ ತೈಲಾಭ್ಯಂಜನ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ನೆರವೇರಿತು.

ಪರ್ಯಾಯ ಶ್ರೀಪಾದರಾದ ಶ್ರೀ ವೇದವರ್ಧನತೀರ್ಥರು ತಮ್ಮ ವಿದ್ಯಾಗುರುಗಳಾದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು ಹಾಗೂ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರ ಸಮ್ಮುಖದಲ್ಲಿ ಚಂದ್ರಶಾಲೆಯಲ್ಲಿ ಎಣ್ಣೆ ಶಾಸ್ತ್ರವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಯತಿಗಳು ಎಣ್ಣೆ ಶಾಸ್ತ್ರವನ್ನು ಪೂರೈಸಿದ ಬಳಿಕ ಭಕ್ತಾದಿಗಳಿಗೂ ಎಣ್ಣೆ ಶಾಸ್ತ್ರ ನೆರವೇರಿಸಿದರು. ಶ್ರೀಮಠದ ಸಿಬ್ಬಂದಿಯೂ ಎಣ್ಣೆ ಶಾಸ್ತ್ರ ಪೂರೈಸಿ ತೈಲಾಭ್ಯಂಜನ ಮಾಡಿಕೊಳ್ಳುವ ಮೂಲಕ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಅಷ್ಟಮಠಗಳ ವಿದ್ವಾಂಸರು, ಪರ್ಯಾಯ ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು, ಭಕ್ತರು ಹಾಗೂ ಶ್ರೀಮಠದ ಸಿಬ್ಬಂದಿ ಉಪಸ್ಥಿತರಿದ್ದರು.

More like this
Related

ವಾದಿರಾಜ ವಾಲಗ ಮಂಡಳಿ ಸಂಪೂರ್ಣ ವಾಗಿ ಕರಾವಳಿಗರಿಂದಲೇ ನಿರ್ಮಾಣವಾದ ಚಲನ ಚಿತ್ರ: ಡಾ. ರಾಜೇಂದ್ರ ಕುಮಾರ್

ಮಂಗಳೂರು: ಕರಾವಳಿಗರೇ ಸೇರಿ ಪ್ರಥಮ ಬಾರಿಗೆ ನಿರ್ಮಿಸಿರುವ ಚಲನ ಚಿತ್ರ 'ವಾದಿರಾಜ...

ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸಹಿತ ನಾಲ್ವರು ಆರೋಪಿಗಳು ವಶಕ್ಕೆ

ಉಡುಪಿ: ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೆರ್ಡೂರು ಪ್ರದೀಪ್ ಪೂಜಾರಿ...

ಪ್ರದೀಪ್ ಪೂಜಾರಿ ಪ್ರಕರಣ ಸಿಐಡಿಗೆ ಒಪ್ಪಿಸಿ: ಸಹೋದರ ದಿಲೀಪ್ ಪೂಜಾರಿ ಆಗ್ರಹ

ಉಡುಪಿ: ಪೆರ್ಡೂರು ಪ್ರದೀಪ್ ಪೂಜಾರಿ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವ್ಯವಸ್ಥೆಯ ಮೇಲೆ...

Copying is disabled on Udupi Digital News.