Monday, November 9, 2026

ವಾದಿರಾಜ ವಾಲಗ ಮಂಡಳಿ ಸಂಪೂರ್ಣ ವಾಗಿ ಕರಾವಳಿಗರಿಂದಲೇ ನಿರ್ಮಾಣವಾದ ಚಲನ ಚಿತ್ರ: ಡಾ. ರಾಜೇಂದ್ರ ಕುಮಾರ್

ಮಂಗಳೂರು: ಕರಾವಳಿಗರೇ ಸೇರಿ ಪ್ರಥಮ ಬಾರಿಗೆ ನಿರ್ಮಿಸಿರುವ ಚಲನ ಚಿತ್ರ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಲನಚಿತ್ರ ಸಂಪೂರ್ಣಗೊಂಡಿದ್ದು ಡಿಸೆಂಬರ್ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಧರಿಸಿ ದ್ದೇವೆ ಎಂದುಎಂ.ಎನ್.ಆರ್. ಪ್ರೊಡಕ್ಷನ್ ನ ಮಾಲೀಕರು ಮತ್ತು ಚಲನಚಿತ್ರದ ನಿರ್ಮಾಪಕರಾದ ಡಾ.ಎಂ. ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

‘ವಾದಿರಾಜ ವಾಲಗ ಮಂಡಳಿ ‘ಚಲನಚಿತ್ರದ ಪೋಸ್ಟರ್ ನ್ನು ಶನಿವಾರ ಹೊಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಈಗಾಗಲೇ ತಮ್ಮ ಬ್ಯಾನರ್ ನಲ್ಲಿ ಯಶಸ್ವಿ ಸಿನೆಮಾ ‘ಗಲಾಟೆ’ ಮತ್ತು ‘ಜೋಗುಳ’ ಎಂಬ ಧಾರಾವಾಹಿಗಳನ್ನು ನಿರ್ಮಿಸಿದ್ದು ಉತ್ತಮ ಅಭಿರುಚಿಯ ಕನ್ನಡ ಸಿನೆಮಾ ಗಳನ್ನು ನಿರ್ಮಾಣ ಮಾಡುವಲ್ಲಿ ಒಲವು ತೋರಿಸಿದೆ. ಇಂದು ನಮ್ಮ ಬಹು ನಿರೀಕ್ಷೆಯ ‘ವಿವಿಎಂ’ ಚಿತ್ರದ ಪೋಸ್ಟರ್ ನ್ನು ಅನಾವರಣ ಗೊಳಿಸುವ ಮೂಲಕ ಚಲನಚಿತ್ರದ ಮೊದಲ ನೋಟದ ಪರಿಚಯ ಮಾಡಿಸಿದ್ದೇವೆ.

ಬ್ರಹ್ಮಾವರ, ಮಂಗಳೂರು, ಮುಲ್ಕಿ, ಕಾಸರಗೋಡು ಮುಂತಾದ ಪ್ರದೇಶದಲ್ಲಿ ಸುಮಾರು 55 ದಿನಗಳ ಕಾಲ ಎರಡು ಹಂತದಲ್ಲಿ ಚಿತ್ರೀಕರಣ ನಡೆದಿದೆ. ‘ವಿವಿಎಮ್’ ಕರಾವಳಿ ಕನ್ನಡದ ಸೊಗಡಿನಲ್ಲಿದ್ದು ಉತ್ತಮವಾಗಿ ಮೂಡಿ ಬಂದಿದ್ದು ಸಂಪೂರ್ಣ ಹಾಸ್ಯದೊಂದಿಗೆ ಕುಟುಂಬ ಸಮೇತ ನೋಡುವ ಮನೋರಂಜನಾತ್ಮಕ ಚಿತ್ರವಾಗಿದೆ ಎಂದರು.

ಗುಂಡುಮಾಮ ಖ್ಯಾತಿಯ ನವೀನ್ ಡಿ ಪಡೀಲ್, ‘ಸು ಪ್ರಮ್ ಸೊ’ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪ ರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು, ಲಕ್ಷಣ ಮಲ್ಲೂರು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಅರ್ಜುನ್ ವೇದಾಂತ್, ಅಥರ್ವ ಪ್ರಕಾಶ್ ನಾಯಕ ರಾಗಿ, ತನ್ವಿ ರಾವ್, ವೇನ್ಯ ರೈ ನಾಯಕಿಯರಾಗಿ ಮಿಂಚಿದ್ದಾರೆ.

ಅನುಭವಿ ಛಾಯಾಗ್ರಾಹಕ ಚೆನ್ನೈಯ ಎಸ್.ಚಂದ್ರಶೇಖರನ್ ಕೈಚಳಕ ಚಿತ್ರಕ್ಕಿದೆ. ಮಣಿಕಾಂತ್ ಕದ್ರಿ ಸಂಗೀತ ಸಿನಿ ರಸಿಕರ ಮನತಣಿಸಲಿದೆ. ಸ್ಟಂಟ್ ಶಿವು ಸಾಹಸವಿದೆ. ವಿನಾಯಕ ಆಚಾರ್ಯ ನೃತ್ಯ ನಿರ್ದೇಶನವಿದೆ. ಜಯಪ್ರಕಾಶ್ ತುಂಬೆಯವರುನಿರ್ಮಾಪಕರಾಗಿಕಾರ್ಯಕಾರಿ ಸಹಕರಿಸಿದ್ದಾರೆ. ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮಣ ಕುಮಾರ್ ಮಲ್ಲೂರು ನಿರ್ಮಾಪಕರಾಗಿ ಮತ್ತು ರಾಜೇಶ್ ಕುಡ್ಲ ಪ್ರೊಡಕ್ಷನ್ ಮಾನೇಜರ್ ಆಗಿ ದುಡಿದಿದ್ದಾರೆ. ಪ್ರಸಿದ್ದ ಕಲಾವಿದ ದೇವಿ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ.ರವರಾಹ ರೂಪಂ ಹಾಡಿನ ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ, ಸಾಹಿತಿ ಶಶಿರಾಜ್ ಕಾವೂರು ಈ ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ.ಹಾಸ್ಯ ಮತ್ತು ಕುತೂಹಲಭರಿತ ಕಥಾಹಂದರ ಹೊಂದಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರ ಕುಟುಂಬ ಸಮೇತ ಒಟ್ಟಾಗಿ ಕುಳಿತು ನೋಡಬಹು ದಾದ ಮನೋರಂಜನಾತ್ಮಕ ಸಿನೆಮಾವಾಗಿ ಮೂಡಿಬರಲಿದೆ. ಕರಾವಳಿಯ ಸಂಭಾಷಣಾ ಶೈಲಿ ಮತ್ತು ಕಥಾ ಹಂದರ ಇದರ ಧನಾತ್ಮಕ ಅಂಶಗಳಾಗಿವೆ ಎಂದವರು ತಿಳಿಸಿದ್ದಾರೆ.

ನಿರ್ದೇಶಕ ಶಶಿರಾಜ್ ಕಾವೂರು ಮಾತನಾಡುತ್ತಾ,ಚಲನಚಿತ್ರದ ನವಿರಾದ ಹಾಸ್ಯ ಮತ್ತು ಗುಣಮಟ್ಟವನ್ನು ನೋಡಿ ಇದನ್ನು ನೆರೆರಾಜ್ಯದ ಕೇರಳಿಗರೂ ಇಷ್ಟ ಪಡುತ್ತಾರೆ ಎಂಬ ವಿಶ್ವಾಸದಿಂದ ಇದನ್ನು ಮಲೆಯಾಳಂ, ತಮಿಳು ಭಾಷೆಗಳ ಡಬ್ಬಿಂಗ್ ನಡೆಯುತ್ತಿದ್ದು ಕಾರ್ಯ ಪ್ರಗತಿಯಲ್ಲಿದೆ ಎಂದರು.ಸಿನೆಮಾದಲ್ಲಿ ಒಂಬತ್ತು ಹಾಡುಗಳಿದ್ದು, ಐದು ಪೂರ್ಣ ಪ್ರಮಾಣದ ಹಾಡಾಗಿದ್ದರೆ ನಾಲ್ಕು ತುಣುಕು ಹಾಡುಗಳಿವೆ. ಬ್ರಹ್ಮಕಲಶ ಹಾಡು ಹಾಡಿದ ಕೆನಡಾ ಮೂಲದ ಅಭಿ ವಿ, ವರಾಹರೂಪಂ ಹಾಡಿದ ಚೆನ್ನೈ ಮೂಲದ ಸಾಯಿವಿಶ್ಲೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾ ದೇವನ್, ರವೀಂದ್ರ ಪ್ರಭು, ಮಣಿಕಾಂತ್ ಕದ್ರಿ ಮುಂತಾದವರು ಹಾಡುಗಳಿಗೆ ದನಿಯಾಗಿದ್ದು ಎಲ್ಲಾ ಹಾಡುಗಳು ಇಂಪಾಗಿ ಮೂಡಿಬಂದಿವೆ. ಸಿನೇಮಾ ತೆರೆಗೆ ಬರಲು ತಯಾರಿದ್ದರೂ ಬೇರೆ ಸಿನೆಮಾಗಳಿಗೆ ಸ್ಪರ್ಧೆ ಆಗದಂತೆ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಶಶಿರಾಜ್ ಕಾವೂರು ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಕಾರ್ಯಕಾರಿ ನಿರ್ಮಾಪಕ ರಾದ ಲಕ್ಷಣ ಮಲ್ಲೂರು, ಸಂತೋಷ್ ಶೆಟ್ಟಿ, ವಿವಿಎಮ್ ತಂಡದಲ್ಲಿ ನವೀನ್ ಡಿ. ಪಡೀಲ್, ಮಣಿಕಾಂತ್ ಕದ್ರಿ ಮುಂತಾದವರು ಉಪಸ್ಥಿತರಿದ್ದರು.

More like this
Related

ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಎಣ್ಣೆ ಶಾಸ್ತ್ರ, ತೈಲಾಭ್ಯಂಜನ

ಉಡುಪಿ: ದೀಪಾವಳಿ ಹಬ್ಬದ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ...

ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸಹಿತ ನಾಲ್ವರು ಆರೋಪಿಗಳು ವಶಕ್ಕೆ

ಉಡುಪಿ: ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೆರ್ಡೂರು ಪ್ರದೀಪ್ ಪೂಜಾರಿ...

ಪ್ರದೀಪ್ ಪೂಜಾರಿ ಪ್ರಕರಣ ಸಿಐಡಿಗೆ ಒಪ್ಪಿಸಿ: ಸಹೋದರ ದಿಲೀಪ್ ಪೂಜಾರಿ ಆಗ್ರಹ

ಉಡುಪಿ: ಪೆರ್ಡೂರು ಪ್ರದೀಪ್ ಪೂಜಾರಿ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವ್ಯವಸ್ಥೆಯ ಮೇಲೆ...

Copying is disabled on Udupi Digital News.