Sunday, October 18, 2026

ಕುಂದಾಪುರದಲ್ಲಿ ಹುಲಿವೇಷದ ಅಬ್ಬರ: ಅ.19ರಂದು ನೃತ್ಯ ಪ್ರದರ್ಶನ

ಪಾರಂಪರಿಕ ಕಲೆಯ ಉಳಿವಿಗೆ ಕಲಾಕ್ಷೇತ್ರದ ಹೆಜ್ಜೆ

ಕುಂದಾಪುರ: ಕರಾವಳಿಯ ಸಾಂಪ್ರದಾಯಿಕ ಕಲೆಯಾದ ಹುಲಿವೇಷಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ವತಿಯಿಂದ ಅಕ್ಟೋಬರ್ 19ರಂದು ಸಂಜೆ 7 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್‌ನ ಬಯಲು ರಂಗಮಂದಿರದಲ್ಲಿ ಹುಲಿವೇಷ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ್‌ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನವರಾತ್ರಿ ಸಂದರ್ಭದಲ್ಲಿ ವಿಶೇಷವಾಗಿ ಪ್ರದರ್ಶಿಸಲಾಗುವ ಹುಲಿವೇಷ ನೃತ್ಯವು ಕುಂದಾಪುರದ ಸಾಂಸ್ಕೃತಿಕ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ತಾಸೆ, ಡೋಲು ಸೇರಿದಂತೆ ವಿವಿಧ ವಾದ್ಯಗಳ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಹುಲಿವೇಷಧಾರಿಗಳ ನರ್ತನ ನೋಡುಗರ ಗಮನ ಸೆಳೆಯುತ್ತದೆ.

ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಹಲವು ವರ್ಷಗಳಿಂದ ಹುಲಿವೇಷ ಕಲಾವಿದರೊಂದಿಗೆ ಕೈಜೋಡಿಸಿ, ಸಾರ್ವಜನಿಕರಿಗಾಗಿ ವಿಶೇಷ ವೇದಿಕೆಯಲ್ಲಿ ಈ ನೃತ್ಯ ಪ್ರದರ್ಶನವನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯೂ ಕುಂದಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವಿವಿಧ ಹುಲಿವೇಷ ತಂಡಗಳು ಭಾಗವಹಿಸಿ ಕಲಾಸಕ್ತರನ್ನು ರಂಜಿಸಲಿವೆ.

ಪಾರಂಪರಿಕ ಕಲೆಯನ್ನು ಉಳಿಸಿ ಮುಂದಿನ ತಲೆಮಾರುಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಬಿ. ಕಿಶೋರ್‌ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

More like this
Related

ಮಹಾಮಸ್ತಕಾಭಿಷೇಕವನ್ನು ಕಾರ್ಕಳದ ಹಬ್ಬವಾಗಿ ಆಚರಿಸೋಣ: ಡಾ.ಎಂ.ಎನ್.ರಾಜೇಂದ್ರ ಕುಮಾರ್

ಕಾರ್ಕಳ: ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವನ್ನು ಕೇವಲ ಒಂದು...

ಅ. 21ರಂದು ಉಚ್ಚಿಲ ದಸರಾ ವಿಸರ್ಜನಾ ಶೋಭಾಯಾತ್ರೆ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಮಾರ್ಗ ಬದಲಾವಣೆ

ಉಡುಪಿ: ಉಚ್ಚಿಲ ದಸರಾ ಮಹೋತ್ಸವದ ಬೃಹತ್ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಅಕ್ಟೋಬರ್ 21ರಂದು...

ಉಡುಪಿ ಉಚ್ಚಿಲ ದಸರಾ: ಕಿನ್ನಿಪಿಲಿ ನಲಿಕೆಯಲ್ಲಿ ಪುಟಾಣಿಗಳ ಹುಲಿವೇಷದ ಸಂಭ್ರಮ

ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ...

ಉಡುಪಿ ಉಚ್ಚಿಲ ದಸರಾ-2026: ಪ್ರೇಕ್ಷಕರಿಗೆ ರಸದೌತಣ ನೀಡಿದ ‘ಪೊಣ್ಣು ಪಿಲಿ ನಲಿಕೆ’ ಪ್ರದರ್ಶನ 

ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ...

Copying is disabled on Udupi Digital News.