Sunday, November 15, 2026

ಕದಳೀ ಪ್ರಿಯ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರಿಗೆ ಪ್ರಥಮ ಆಮಂತ್ರಣ ಸಮರ್ಪಣೆ

ಸೋದೆ ಶ್ರೀ ವಾದಿರಾಜ ಮಠದ ವತಿಯಿಂದ ಆಯೋಜಿಸಲಾಗುತ್ತಿರುವ ರಾಷ್ಟ್ರಮಟ್ಟದ ಬಾಳೆ ಮೇಳ ಕದಳೀ ವಿಶ್ವದರ್ಶನದ ಆಮಂತ್ರಣ ಪತ್ರಿಕೆಗಳ ವಿತರಣಾ ಕಾರ್ಯಕ್ಕೆ ಇಂದಿನಿಂದ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಈ ಶುಭ ಸಂದರ್ಭದಲ್ಲಿ ಮೊದಲ ಆಮಂತ್ರಣ ಪತ್ರಿಕೆಯನ್ನು ಕದಳೀ ಪ್ರಿಯರಾದ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶ್ರೀಪಾದರ ಸಂಕಲ್ಪದಂತೆ ಕದಳೀ ವಿಶ್ವದರ್ಶನ ಕಾರ್ಯಕ್ರಮವು ನಿರ್ವಿಘ್ನವಾಗಿ ಹಾಗೂ ಯಶಸ್ವಿಯಾಗಿ ನೆರವೇರಲೆಂದು ಹಾರೈಸಿದರು.

ತದನಂತರ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಕುಲಾಲ್ ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಯಿತು.

More like this
Related

ಬ್ರಹ್ಮಾವರ | ಮಾಬುಕಳ ಸೀತಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ

ಕೋಟ: ಪತಿ ಹಾಗೂ ಪತ್ನಿ ಕೈಗಳನ್ನು ಚೂಡಿದಾರದ ಶಾಲಿನಿಂದ ಪರಸ್ಪರ ಕಟ್ಟಿಕೊಂಡು...

ಬೆಂಗಳೂರಿಗೆ ಹೊರಟಿದ್ದ ಪಡುಕೋಣೆಯ ಇಂಜಿನಿಯರ್ ಅಪಘಾತಕ್ಕೆ ಬಲಿ: ಹೆತ್ತವರ ಏಕೈಕ ಪುತ್ರನ ದುರಂತ ಸಾವು!

ಚನ್ನರಾಯಪಟ್ಟಣ ಸಮೀಪ ಬೈಕ್ ಅಪಘಾತದಲ್ಲಿ 26ರ ಹರೆಯದ ಯುವಕ ಸಾವು ಕುಂದಾಪುರ: ಉದ್ಯೋಗ...

ನಿಗಮ-ಮಂಡಳಿ ನೇಮಕಾತಿ: ಆರೆಸ್ಸೆಸ್ ಹಿನ್ನೆಲೆಯುಳ್ಳರಿಗೆ ರಾಜೀನಾಮೆ ನೀಡಲು ಸೂಚನೆ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ‘ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಸಂದರ್ಭದಲ್ಲಿ...

ಐಫೋನ್‌ ಗಾಗಿ ತಾತನನ್ನೇ ಕೊಂದ ಅಪ್ರಾಪ್ತ ಮೊಮ್ಮಗಳು !

ಕೊಟ್ಟಾಯಂ: ತನಗೆ ಐಫೋನ್ ಮತ್ತು ಸ್ನೇಹಿತನಿಗೆ ಮೋಟಾರ್ ಸೈಕಲ್ ಖರೀದಿಸಲು ಹಣ...

Copying is disabled on Udupi Digital News.