Sunday, November 15, 2026

ನಿಗಮ-ಮಂಡಳಿ ನೇಮಕಾತಿ: ಆರೆಸ್ಸೆಸ್ ಹಿನ್ನೆಲೆಯುಳ್ಳರಿಗೆ ರಾಜೀನಾಮೆ ನೀಡಲು ಸೂಚನೆ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ‘ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರೆಸ್ಸೆಸ್) ಕೆಲವರಿಗೆ ಅವಕಾಶ ಕಲ್ಪಿಸಿದ್ದು, ಅವರಿಗೆ ಈಗಾಗಲೇ ರಾಜೀನಾಮೆ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪಷ್ಟಣೆ ನೀಡಿದ್ದಾರೆ.

ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಆರೆಸ್ಸೆಸ್ ಹಿನ್ನೆಲೆಯುಳ್ಳವರಿಗೆ ರಾಜೀನಾಮೆ ನೀಡಬೇಕು. ಇಲ್ಲವೇ ಸರಕಾರ ಅವರಿಗೆ ನೀಡಿರುವ ಸ್ಥಾನಮಾನ ರದ್ದು ಮಾಡಬೇಕು. ಆರೆಸ್ಸೆಸ್ ನಂಟು ಇರುವವರಿಗೆ ನಿಗಮ-ಮಂಡಳಿ ಹುದ್ದೆಗಳನ್ನು ನೀಡಿದ್ದರೆ ಹಿಂಪಡೆಯಬೇಕೆಂದು ಸೂಚನೆ ನೀಡಿದ್ದೇವೆ ಎಂದರು.

ನಿಗಮ ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ 400ಕ್ಕೂ ಹೆಚ್ಚು ಮಂದಿ ನೇಮಿಸಿದ್ದು, ಆರೆಸ್ಸೆಸ್ ಹಿನ್ನೆಲೆಯುಳ್ಳವರಿಗೆ ಅಚಾತುರ್ಯದಿಂದ ಒಂದೆರಡು ಸ್ಥಾನಗಳನ್ನು ನೀಡಿದ್ದು, ಅದನ್ನು ಸರಿಪಡಿಸಲಾಗುವುದು. ಇನ್ನೂ ಎರಡು ಪಟ್ಟಿ ಬರಲಿದ್ದು, ಪಕ್ಷ, ಸಂಘಟನೆಗೆ ಶ್ರಮಿಸಿದ ಎಲ್ಲರಿಗೂ ಅವಕಾಶ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.

More like this
Related

ಐಫೋನ್‌ ಗಾಗಿ ತಾತನನ್ನೇ ಕೊಂದ ಅಪ್ರಾಪ್ತ ಮೊಮ್ಮಗಳು !

ಕೊಟ್ಟಾಯಂ: ತನಗೆ ಐಫೋನ್ ಮತ್ತು ಸ್ನೇಹಿತನಿಗೆ ಮೋಟಾರ್ ಸೈಕಲ್ ಖರೀದಿಸಲು ಹಣ...

ತಾಯಿಗೆ ಇರಿದು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ

ಗುವಾಹಟಿ: ಗುವಾಹಟಿಯಲ್ಲಿ 9ನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ತಾಯಿಗೆ ಚಾಕುವಿನಿಂದ ಇರಿದು,...

ಮಂಡ್ಯದಲ್ಲಿ ಭೀಕರ ರೈಲು ಅಪಘಾತ: ರೈಲ್ವೇ ಗೇಟ್ ದಾಟಲು ಹೋದ 19 ವರ್ಷದ ಯುವತಿ ಸಾವು

ಮಂಡ್ಯ: ರೈಲ್ವೇ ಗೇಟ್ ಮುಚ್ಚಿದ್ದರೂ ನಿರ್ಲಕ್ಷ್ಯದಿಂದ ಹಳಿ ದಾಟಲು ಮುಂದಾದ ಯುವತಿಯೊಬ್ಬಳು...

ಅಂಡರ್-19 ಏಷ್ಯಾಕಪ್ ಗೆದ್ದ ಭಾರತಕ್ಕೆ ಮೋದಿ ಅಭಿನಂದನೆ: ಯುವ ಕ್ರಿಕೆಟಿಗರ ಸಾಧನೆಗೆ ಮೆಚ್ಚುಗೆ

ನವದೆಹಲಿ: ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್...

Copying is disabled on Udupi Digital News.