Wednesday, October 28, 2026

ನಾಯಕತ್ವಕ್ಕೆ ಬದಲಾವಣೆಯ ಬದ್ಧತೆ ಇರಬೇಕು – ವಾಲ್ಟರ್ ನಂದಳಿಕೆ

ಕುಂದಾಪುರ: ಕರಾವಳಿಯಲ್ಲಿ ಕ್ರೈಸ್ತ ಸಮಾಜದ ಪ್ರಗತಿಗೆ ಕಥೊಲಿಕ್ ಸಭಾ ಕೊಡುಗೆ ವಿಶೇಷವಾಗಿದೆ. ಸಮಾಜ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಠರಾಗಿ ಸಾಮಾಜ ಬೆಳವಣಿಗೆಗೆ ಹೊಂದಬೇಕಾದರೆ ನಾಯಕತ್ವಕ್ಕೆ ಬದಲಾವಣೆ ಹಾಗೂ ಪರಿಸ್ಥಿತಿಯ ಅರಿವು ಇರಬೇಕು . ಸದಾ ಹೊಸತನದೊಂದಿಗೆ ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ಪತ್ರಕರ್ತ ವಾಲ್ಟರ್ ನಂದಳಿಕೆಯವರು ಸೇಂಟ್ ಮೇರಿಸ್ ಸಭಾಂಗಣದಲ್ಲಿ ನಡೆದ ಕಥೊಲಿಕ್ ಸಭಾ ವಲಯ ಮಟ್ಟದ ಮುಖಂಡರ ಸಹಮಿಲನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು,

1990 ರಲ್ಲಿ ಆರಂಭಗೊಂಡು,ಕಳೆದ 36 ವರ್ಷಗಳಿಂದ ಸೇವೆಯನ್ನು ಸಲ್ಲಿಸಿದ 12 ಚರ್ಚ್ ಘಟಕ ಹಾಗೂ ವಲಯದ ಅಧ್ಯಕ್ಷರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಪೌಲ್ ರೇಗೂ ರವರು, ಮುಖಂಡರನಿಸಿ ಕೊಂಡವರು ಸೇವೆ , ತ್ಯಾಗ ಮತ್ತು ಏಕತೆಯ ಧ್ಯೇಯನ್ನು ಯಾವಾಗಲೂ ಮರೆಯಬಾರದು ಎಂದರು.

ಶೆವೊಟ್ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್ರಾಯ್ ಕಿರಣ್ ಕ್ರಾಸ್ಟೊ ಅವರು ಕಥೊಲಿಕ್ ಸಭೆ ನಡೆದ ಬಂದ ದಾರಿಯನ್ನು ವಿವರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷರಾದ ಶೈಲಾ ಅಲ್ಮೆಡ ರವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಇತ್ತೀಚಿಗೆ AICU ರಾಜ್ಯಅಧ್ಯಕ್ಷರಾಗಿ ಆಯ್ಕೆಯಾದ ಆಲ್ವಿನ್ ಕ್ವಾಡ್ರಸ್ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಸರಕಾರದಿಂದ ಆಯ್ಕೆಯಾದ ಪಿಯುಸ್ ಡಿಸೋಜರವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ರೇಮಿ ಫೆರ್ನಾಂಡಿಸ್ ಹಾಗೂ ಕೋಶಾಧಿಕಾರಿ ರೀಟಾ ಕ್ವಾಡ್ರಸ್ ಉಪಸ್ಥಿತರಿದ್ದರು.

ವಲಯ ಸಮಿತಿಯ ಮಾಜಿ ಅಧ್ಯಕ್ಷರಾದ ರುಫಸ್ ಬರೆಟ್ಟೊ, ವಿನೋದ್ ಕ್ರಾಸ್ಟೊ ಹಾಗೂ ಕೋಟ ಘಟಕದ ಅಧ್ಯಕ್ಷರಾದ ವಿಲ್ಟನ್ ಒಲಿವೇರಾ ಸನ್ಮಾನಿತರ ಹಾಗೂ ಮುಖ್ಯ ಅತಿಥಿಗಳ ಪರಿಚಯ ಸಭೆಗೆ ನೀಡಿದರು.

ಕಾರ್ಯಕ್ರಮದ ಸಂಚಾಲಕರಾದ ಆಶಾ ಕರ್ವಾಲೋ ಕಾರ್ಯಕ್ರಮವನ್ನು ನಿರೂಪಿಸಿ, ವಲಯ ಸಮಿತಿಯ ಆಮ್ಚೊಂ ಸಂದೇಶ್ ಪತ್ರಿಕಾ ಪ್ರತಿನಿಧಿ ಮೇಬಲ್ ಡಿಸೋಜ ವಂದಿಸಿದರು.

More like this
Related

ಎಸ್‌.ಐ.ಆರ್ ಬಳಿಕ ಉಡುಪಿ ಜಿಲ್ಲೆಯಲ್ಲಿ 10.14 ಲಕ್ಷ ಮತದಾರರು; ರಾಜ್ಯದಲ್ಲೇ ಅತಿ ಕಡಿಮೆ ಇಳಿಕೆ ದಾಖಲು

ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡು...

ಕರ್ನಾಟಕ S I R | ಅಂತಿಮ ಮತದಾರರ ಪಟ್ಟಿ ಪ್ರಕಟ: ರಾಜ್ಯದಲ್ಲಿ ಒಟ್ಟು 4 ಕೋಟಿ, 55 ಲಕ್ಷದ 11 ಮತದಾರರು: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆ...

1.07 ಕೋಟಿ ರೂ. ಮೌಲ್ಯದ 537 ಕಳುವಾದ ಮೊಬೈಲ್ ಪತ್ತೆ: ವಾರಸುದಾರರಿಗೆ ಮರಳಿಸಿದ ವಿಜಯಪುರ ಪೊಲೀಸರು

ವಿಜಯಪುರ : ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ನಿತ್ಯಜೀವನದಲ್ಲಿ ಅತ್ಯಾವಶ್ಯಕವಾಗಿರುವ ಮೊಬೈಲ್ ಫೋನ್‌ಗಳು...

ಬಾರ್ಕೂರಿನಲ್ಲಿ ನ. 1ರಂದು ಸುಜ್ಞಾನ ವಿದ್ಯಾರ್ಥಿ ವೇತನ ಪರೀಕ್ಷೆ

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಬಾರ್ಕೂರು: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಹಾಗೂ...

Copying is disabled on Udupi Digital News.