Sunday, April 26, 2026

ಮಣಿಪಾಲ: ಡಿಸಿ ಕಚೇರಿ ಬಳಿ ಮಾವು ಕೊಯ್ಯುವ ವೇಳೆ ವಿದ್ಯುತ್ ಸ್ಪರ್ಶ : ವ್ಯಕ್ತಿ ಸಾವು

ಮಣಿಪಾಲ: ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ಮಾವಿನ ಕಾಯಿ ಕೊಯ್ಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ.

ಮೃತ ದುರ್ದೈವಿ ಅಲೆವೂರು ನಿವಾಸಿಸದಾನಂದ ದೇವಾಡಿಗ(55) ಎಂದು ಗುರುತಿಸಲಾಗಿದೆ. ಅವರು ಗ್ರಾಮ ಸಹಾಯಕನಾಗಿ -ಕಾರ್ಯನಿರ್ವಹಿಸುತ್ತಿದ್ದರು.

ಶುಕ್ರವಾರ(ಏ24) ಬೆಳಗ್ಗೆ ಮಾವಿನ ಕಾಯಿ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ಇದರಿಂದ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿಗಳು ಆಗಮಿಸಿ ಮೃತ ದೇಹ ತೆರವುಗೊಳಿಸಲು ನೆರವಾದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಸಹಕರಿಸಿದರು.

More like this
Related

ಮರಳು ಓವರ್ಲೋಡಿಂಗ್ ವಿರುದ್ಧ ಉಡುಪಿ ಪೊಲೀಸರ ವಿಶೇಷ ಕಾರ್ಯಾಚರಣೆ; 13 ವಾಹನ ವಶ

ಉಡುಪಿ: ಜಿಲ್ಲೆಯಲ್ಲಿ ಮರಳು ಸಾಗಾಣಿಕೆಯಲ್ಲಿ ಹೆಚ್ಚುವರಿ ಬಾರ (ಓವರ್ಲೋಡಿಂಗ್) ಮಾಡಿ ಅಕ್ರಮವಾಗಿ...

ಪಡುಬಿದ್ರಿ: ಬೈಕ್ ಕಳವು ಪ್ರಕರಣ ಭೇದಿಸಿದ ಪೊಲೀಸರು; ಆರೋಪಿಯ ಬಂಧನ

ಉಡುಪಿ: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣವನ್ನು...

ಕಾರ್ಕಳ: 24 ಗಂಟೆಯೊಳಗೆ ಮನೆ ಕಳವು ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ

ಕಾರ್ಕಳ: ಮನೆ ಕಳವು ಪ್ರಕರಣವನ್ನು ಕಾರ್ಕಳ ನಗರ ಪೊಲೀಸರು 24 ಗಂಟೆಯೊಳಗೆ...

ಉಡುಪಿ: ನಾಪತ್ತೆಯಾಗಿದ್ದ ಉಪನ್ಯಾಸಕರ ಮೃತದೇಹ ಬಾವಿಯಲ್ಲಿ ಪತ್ತೆ

ಉಡುಪಿ: ನಾಪತ್ತೆಯಾಗಿದ್ದ ಉಪನ್ಯಾಸಕರೊಬ್ಬರ ಮೃತದೇಹ ಮನೆಯ ಬಾವಿಯಲ್ಲಿ ಶನಿವಾರ ಪತ್ತೆಯಾಗಿದೆ. ಮೃತರನ್ನು ಉಡುಪಿ...

Copying is disabled on Udupi Digital News.