Saturday, May 2, 2026

ಕಾರ್ಕಳ: 24 ಗಂಟೆಯೊಳಗೆ ಮನೆ ಕಳವು ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ


ಕಾರ್ಕಳ: ಮನೆ ಕಳವು ಪ್ರಕರಣವನ್ನು ಕಾರ್ಕಳ ನಗರ ಪೊಲೀಸರು 24 ಗಂಟೆಯೊಳಗೆ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಏಪ್ರಿಲ್ 23 ರ ಬೆಳಿಗ್ಗೆ 9.10 ಗಂಟೆಯಿಂದ ಏ 24ರ ಸಂಜೆ 6.00 ಗಂಟೆಯ ಅವಧಿಯಲ್ಲಿ ಕಳ್ಳರು ಪತ್ತೊಂಜಿ ಕಟ್ಟೆಯ ಶಂಕರ ಕುಲಾಲ್ ಅವರ ಮನೆಯ ಬಾಗಿಲು ಮೀಟಿ ಒಳನುಗ್ಗಿ ಕಪಾಟಿನಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 3 ಚಿನ್ನದ ಉಂಗುರಗಳು, ಒಂದು ಜೋಡಿ ಬೆಂಡೋಲೆ, ಒಂದು ಜೋಡಿ ಜುಮ್ಕಿ ಸೇರಿದಂತೆ ಒಟ್ಟು ಸುಮಾರು 2.64 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು.

ಈ ಸಂಬಂಧ ಶಂಕರ ಕುಲಾಲ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಕಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್., ಪಿಎಸ್ಐ ಮುರುಳೀಧರ ನಾಯ್ಕ, ಶಿವಕುಮಾರ್ ಎಸ್.ಆರ್. ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಯಾದ ಆನಂದ ಕುಲಾಲ್ (40), ಬೈರಂಪಳ್ಳಿ ಗ್ರಾಮ ನಿವಾಸಿಯನ್ನು ಬಂಧಿಸಿದೆ. ಇದಲ್ಲದೆ ಕಳವು ಚಿನ್ನವನ್ನು ಮಾರಾಟ ಮಾಡಿದ್ದ ಜಯರಾಮ ಆಚಾರ್ಯ (54), ಕೈಕಂಬ ಅಜೆಕಾರು ಮರ್ಣೆ ಗ್ರಾಮದ ನಿವಾಸಿಯನ್ನು ಸಹ ಬಂಧಿಸಲಾಗಿದೆ.

ಆರೋಪಿತರಿಂದ ಕಳವಾದ ಸುಮಾರು 5.60 ಲಕ್ಷ ರೂ. ಮೌಲ್ಯದ 39 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

More like this
Related

ಕಲಬೆರಕೆ ಸೇಂದಿ ಮಾರಾಟ ಆರೋಪ: ಇಬ್ಬರ ಬಂಧನ

ರಾಯಚೂರು: ತಾಲೂಕಿನ ಕೊರ್ತಕುಂದ ಗ್ರಾಮದಲ್ಲಿ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಆರೋಪದ...

ಪುಣೆಯಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ದೌರ್ಜನ್ಯ, ಹತ್ಯೆ ಆರೋಪ: 65 ವರ್ಷದ ವೃದ್ಧ ಬಂಧನ

ಪುಣೆ, ಮೇ 2: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ತಾಲೂಕಿನಲ್ಲಿ ನಾಲ್ಕು...

ಜೇಮಿಸನ್ ವರ್ತನೆ ಸಹಜ ಪ್ರತಿಕ್ರಿಯೆ: ಮ್ಯಾಕ್‌ಕ್ಲೆನಘನ್

ಜೈಪುರ್, : ರಾಜಸ್ಥಾನ್ ರಾಯಲ್ಸ್ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ವಿಕೆಟ್...

ಥಾಮಸ್ ಕಪ್‌ನಲ್ಲಿ ಫ್ರಾನ್ಸ್ ಇತಿಹಾಸ: ಮೊದಲ ಬಾರಿಗೆ ಸೆಮಿಫೈನಲ್‌ಗೆ, ಭಾರತಕ್ಕೆ ಎದುರಾಳಿ

ಡೆನ್ಮಾರ್ಕ್, : ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫ್ರಾನ್ಸ್ ಇತಿಹಾಸ ನಿರ್ಮಿಸಿ...

Copying is disabled on Udupi Digital News.