Monday, May 4, 2026

ಕಲಬೆರಕೆ ಸೇಂದಿ ಮಾರಾಟ ಆರೋಪ: ಇಬ್ಬರ ಬಂಧನ

ರಾಯಚೂರು: ತಾಲೂಕಿನ ಕೊರ್ತಕುಂದ ಗ್ರಾಮದಲ್ಲಿ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯಾಪಲದಿನ್ನಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ನೀಲಮ್ಮ ಮತ್ತು ವೆಂಕಟೇಶ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 67 ಲೀಟರ್ ಸೇಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಲಬೆರಕೆ ಸೇಂದಿ ಮಾರಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಗ್ರಾಮದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

More like this
Related

ದ್ರಾವಿಡ ನೆಲದಲ್ಲಿ ‘ದಳಪತಿ’ ಕಮಾಲ್, ಬಂಗಾಳದಲ್ಲಿ ‘ದೀದಿ’ ಆಡಳಿತಕ್ಕೆ ಗುಡ್ ಬೈ ಹೇಳಿದ ಮತದಾರ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಖ್ಯಾತ ನಟ 'ದಳಪತಿ' ವಿಜಯ್...

ದಾವಣಗೆರೆ ಉಪ ಚುನಾವಣೆ: ಪ್ರಯಾಸದ ಗೆಲುವು ದಾಖಲಿಸಿದ ಸಮರ್ಥ್ ಶಾಮನೂರು

ದಾವಣಗೆರೆ: ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ...

ಹಾರ್ಮುಜ್ ಜಲಸಂಧಿ ಪ್ರವೇಶಿಸಿದರೆ ದಾಳಿ: ಅಮೆರಿಕ ಸೇನೆಗೆ ಇರಾನ್ ಕಠಿಣ ಎಚ್ಚರಿಕೆ

ತೆಹ್ರಾನ್,: ಹಾರ್ಮುಜ್ ಜಲಸಂಧಿಗೆ ಪ್ರವೇಶಿಸುವ ಯತ್ನ ಮಾಡಿದರೆ ಅಮೆರಿಕದ ಸೇನೆಯ ಮೇಲೆ...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ: ಪಕ್ಷದ ನಾಯಕರ ವಿಶ್ವಾಸ

ನವದೆಹಲಿ, : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರವೃತ್ತಿಗಳಲ್ಲಿ...

Copying is disabled on Udupi Digital News.