ನಿಯಮ ಉಲ್ಲಂಘಿಸಿ ಮಣ್ಣು ಸಾಗಾಟ. ಇನ್ಸೂರೆನ್ಸ್ ಇಲ್ಲದ ಟಿಪ್ಪರ್
ಕುಂದಾಪುರ: ಶೆಟ್ರಕಟ್ಟೆ ಟಿಪ್ಪರ್ ಹಾಗೂ ಸರ್ಕಾರಿ ಬಸ್ ನಡುವಿನ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ಸೇರಿದಂತೆ ಮೂವರ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಟಿಪ್ಪರ್ ಚಾಲಕ ರಾಘವೇಂದ್ರ, ಮಾಲೀಕರಾದ ಸುಮ ಹಾಗೂ ಮಣ್ಣು ಮಾಲೀಕ ಮಂಜುನಾಥ್ ವಿರುದ್ದ ಕೆಎಸ್ಆರ್ಟಿಸಿ ಕುಂದಾಪುರ ಘಟಕದ ಸಂಚಾರಿ ನಿರೀಕ್ಷಕ ದೇವಿದಾಸ್ ಟಿ ಬೋರಕರ ಕೊಟ್ಟ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಿಪ್ಪರ್ ಚಾಲಕನು ವಾಹನದ ಪರವಾನಿಗೆ ನಿಯಮ ಉಲ್ಲಂಘಿಸಿ ಮಿತಿ ಮೀರಿದ ಮಣ್ಣು ಟಿಪ್ಪರ್ ನಲ್ಲಿ ತುಂಬಿಸಿಕೊಂಡು ಬಂದಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಇನ್ಸೂರೆನ್ಸ್ ಇಲ್ಲದ ಟಿಪ್ಪರ್:
ಅಪಘಾತದ ಬಳಿಕ ಟಿಪ್ಪರ್ ದಾಖಲೆಗಳನ್ನು ಪರಿಶೀಲಿಸಿದಾಗ ಟಿಪ್ಪರ್ ನ ಇನ್ಸೂರೆನ್ಸ್ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 01/2026 ಕಲಂ: 110, 303(2) ಬಿಎನ್ಎಸ್ & 4(1ಎ), 21(4)ಎಮ್ಎಮ್ಆರ್ಡಿ ಕಾಯ್ದೆ & 183, 146, 192 182 ಐಎಮ್ ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.




