Tuesday, April 21, 2026

ಪ್ರಾಚ್ಯ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳ ಅರಿವು ಮಹತ್ವ: ಪತ್ರಕರ್ತ ಪ್ರಶಾಂತ ಪಾದೆ

ಯುಡಿ ನ್ಯೂಸ್ ಡಾಟ್ ಕಾಮ್


ಕುಂದಾಪುರ: ಶ್ರಮ ಸಂಸ್ಕೃತಿಯ ಪ್ರತೀಕವಾದ ಪ್ರಾಚ್ಯ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳ ಅರಿವು ಮಹತ್ವವಾದದ್ದು. ಅವುಗಳ ಬಳಕೆಯ ಹಿಂದಿನ ವೈಜ್ಞಾನಿಕ ಕಾರಣಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಉದಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಪ್ರಶಾಂತ ಪಾದೆ ಹೇಳಿದರು.

ಅವರು ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯಿಂದ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಿದ ಪ್ರಾಚ್ಯವಸ್ತುಗಳ ಪ್ರದರ್ಶನದಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿದರು.

ಕುಂದಾಪುರ ಡಾಟ್ ಕಾಮ್ ನ ಸಂಪಾದಕ ಸುನಿಲ್ ಹೆಚ್.ಜಿ ಮಾತನಾಡಿ, ಪ್ರತಿ ಪ್ರಾಚ್ಯ ವಸ್ತುಗಳ ಹಿಂದೆ ಬೆವರಿನ ಮೂಲದ, ಶ್ರಮ ಸಂಸ್ಕೃತಿಯ ಕಥೆ ಇದೆ. ದೀರ್ಘ ಕಾಲ ಬಾಳಿಕೆ ಬರುವ ಮತ್ತು ಮರು ಬಳಕೆಯ ವಸ್ತುಗಳನ್ನು ಹಿರಿಯರು ಯಥೇಚ್ಛವಾಗಿ ಬಳಸುತ್ತಿದ್ದರು. ಇದು ಅವರ ಪರಿಸರ ಕಾಳಜಿಯನ್ನು ಧ್ವನಿಸುತ್ತದೆ. ಇಂದು ಮರು ಬಳಕೆಯಾಗದ ಪ್ಲಾಸ್ಟಿಕ್ ನಂತಹ ವಸ್ತುಗಳಿಂದ ಪ್ರಕೃತಿ ನಾಶವಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳು ಚಿಂತಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಕೆ.ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮನೀಶಾ ಪ್ರಾರ್ಥಿಸಿದರು. ಆದೇಶ್ ಗಾಣಿಗ ಸ್ವಾಗತಿಸಿದರು. ಆಕಾಶ್ ಶೆಟ್ಟಿ, ಕಾವ್ಯ ಅತಿಥಿಗಳನ್ನು ಪರಿಚಯಿಸಿರು. ರಚನಾ ವಂದಿಸಿದರು. ನಿರೀಕ್ಷಾ ನಿರೂಪಿಸಿದರು.

More like this
Related

ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೂ ದಿಗ್ಬಂಧನ ತೆರವುಗೊಳಿಸಲ್ಲ: ಇರಾನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಯುಡಿ ನ್ಯೂಸ್ ಡಾಟ್ ಕಾಮ್ ವಾಷಿಂಗ್ಟನ್: ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೆ ಅಮೆರಿಕ ಇರಾನ್...

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ಸುಳ್ಳು ಸಾಕ್ಷ್ಯ: ವಿಶೇಷ ಕೋರ್ಟ್

ಯುಡಿ ನ್ಯೂಸ್ ಡಾಟ್ ಕಾಮ್ ಬೆಂಗಳೂರು: ಜಿ.ಪಂ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ...

ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು: ಇಬ್ಬರು ಸಾವು

ಯುಡಿ ನ್ಯೂಸ್ ಡಾಟ್ ಕಾಮ್ ಕಾರವಾರ:  ಅತೀ ವೇಗದ ಚಾಲನೆಯಿಂದ ಕಾರೊಂದು ನಿಯಂತ್ರಣ...

ಮುಂಬೈಗೆ ವಿಜಯದ ‘ತಿಲಕ’: ತವರಿನಲ್ಲೇ ರನ್ ಗಳಿಸಲು ತಿಣುಕಾಡಿದ ಗಿಲ್ ಪಡೆ!

ಯುಡಿ ನ್ಯೂಸ್ ಡಾಟ್ ಕಾಮ್ಅಹ್ಮದಾಬಾದ್:  ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ...

Copying is disabled on Udupi Digital News.