Friday, September 25, 2026

ಅಮ್ಮ-ಮಗಳ ವಿಶೇಷ ವೇಷದ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆ: ₹3.45 ಲಕ್ಷಕ್ಕೂ ಅಧಿಕ ಸಹಾಯಧನ

ಉಡುಪಿ: ಸಮಾಜದ ಬಡ ಮಕ್ಕಳ ಉಜ್ವಲ ವಿದ್ಯಾಭ್ಯಾಸದ ಕನಸಿಗೆ ಆಸರೆಯಾಗುವ ಉದ್ದೇಶದಿಂದ ಸಿದ್ಧಿ ಇವೆಂಟ್ಸ್, ಲಷ್ಮಿನಗರ-ಮಲ್ಪೆ ವತಿಯಿಂದ ಅಮ್ಮ-ಮಗಳ ವಿಶೇಷ ವೇಷ ಧರಿಸಿ ಸಂಗ್ರಹಿಸಲಾದ ಒಟ್ಟು ₹3,45,445 ಸಹಾಯಧನವನ್ನು ವಿವಿಧ ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಹಸ್ತಾಂತರಿಸಲಾಯಿತು.

ಕರ್ನಾಟಕ ಪಬ್ಲಿಕ್ ಸ್ಕೂಲ್, ಉದ್ಯಾವರದ ಮನಸ್ವಿ ಅವರಿಗೆ ಒಂದು ವರ್ಷದ ರಿಕ್ಷಾ ಬಾಡಿಗೆ ₹12,700 ಹಾಗೂ ₹10,000 ಮೌಲ್ಯದ ರೇಷನ್ ಸೇರಿದಂತೆ ಒಟ್ಟು ₹22,700 ಸಹಾಯಧನ, ಇದೇ ಶಾಲೆಯ ಎಂಜಲಿಕ ಅವರಿಗೆ ದೃಷ್ಟಿದೋಷ ಇರುವ ಹಿನ್ನೆಲೆಯಲ್ಲಿ ಒಂದು ವರ್ಷದ ರಿಕ್ಷಾ ಬಾಡಿಗೆ ₹12,700 ಹಾಗೂ ₹10,000 ಮೌಲ್ಯದ ರೇಷನ್ ಸೇರಿದಂತೆ ಒಟ್ಟು ₹22,700 ನೆರವು , ಸಾನ್ವಿ ಅವರಿಗೆ ಒಂದು ವರ್ಷದ ರಿಕ್ಷಾ ಬಾಡಿಗೆ ₹9,000 ಹಾಗೂ ₹10,000 ಮೌಲ್ಯದ ರೇಷನ್ ಸೇರಿದಂತೆ ಒಟ್ಟು ₹19,100 ಸಹಾಯಧನ, ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಚೈತ್ರ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಎರಡು ವರ್ಷಗಳ ಕಾಲೇಜು ಶುಲ್ಕ ₹6,000, ಇತರ ಶೈಕ್ಷಣಿಕ ವೆಚ್ಚ ₹4,000 ಹಾಗೂ ರೇಷನ್ ಸೇರಿದಂತೆ ಒಟ್ಟು ₹20,000 ನೆರವು ನೀಡಲಾಯಿತು.

ಇದಲ್ಲದೆ ಗರಡಿಮಜಲ್ ಸರಕಾರಿ ಪ್ರೌಢಶಾಲೆಯ ವಿನ್ಯಾಸ್ ಅವರ ತಂದೆ ಕಳೆದ 10 ವರ್ಷಗಳಿಂದ ಹಾಸಿಗೆ ಹಿಡಿದಿರುವ ಹಿನ್ನೆಲೆಯಲ್ಲಿ ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ರೇಷನ್ ವ್ಯವಸ್ಥೆಗಾಗಿ ₹10,000 ಧನಸಹಾಯ, ಹುಟ್ಟಿನಿಂದಲೇ ಅಂಗವಿಕಲತೆ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬರಿಗೆ ₹10,000 ವೆಚ್ಚದ ವೀಲ್ಚೇರ್ ಹಾಗೂ ರೇಷನ್ಗಾಗಿ ₹10,000 ನೆರವು, ಇದರೊಂದಿಗೆ ವಿದ್ಯಾರ್ಥಿಗಳಿಗೆ ಶಾಲೆಗೆ ಅಗತ್ಯವಿರುವ ಬ್ಯಾಗ್ಗಳು ಹಾಗೂ ಇತರ ಶೈಕ್ಷಣಿಕ ಸಾಮಗ್ರಿ, ಲಕ್ಷ್ಮೀನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ಧ್ವನಿವರ್ಧಕ ನೀಡಲಾಯಿತು.

ತೆಂಕನಿಡಿಯೂರು ಸರಕಾರಿ ಪದವಿಪೂರ್ವ ಕಾಲೇಜಿಗೆ ವಿದ್ಯಾರ್ಥಿಗಳ ಕುಡಿಯುವ ನೀರಿನ ಅಗತ್ಯವನ್ನು ಗಮನಿಸಿ ಸುಮಾರು ₹50,000 ಮೌಲ್ಯದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಲಾಗಿದೆ. ಮಲ್ಪೆಯ ಸರಕಾರಿ ಫಿಷರೀಸ್ ಶಾಲೆಗೂ ಸುಮಾರು ₹50,000 ಮೌಲ್ಯದ ಶುದ್ಧ ಕುಡಿಯುವ ನೀರಿನ ಯಂತ್ರ, ಕೊಳಲಗಿರಿಯ ಸ್ವರ್ಗ ಅನಾಥಾಶ್ರಮಕ್ಕೆ ಒಂದು ದಿನದ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ವೃದ್ಧಾಶ್ರಮದ ಅಗತ್ಯವನ್ನು ಗಮನಿಸಿ ಮೂರು ಊಟದ ಟೇಬಲ್ಗಳನ್ನು ನೀಡಲಾಯಿತು
ಕಾರ್ಯಕ್ರಮದಲ್ಲಿ ಪಂಚಾಯತ್ ಆಡಳಿತ ಅಧಿಕಾರಿ ಹೇಮಂತ್ ಕುಮಾರ್, ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ಬಾಲಕೃಷ್ಣ ಸಾಮಗ, ಆನಂದತೀರ್ಥ ಕುಂಜರುಗಿರಿ ಶಾಲೆಯ ಶಿಕ್ಷಕಿ ಯಶೋಧ ಚಂದ್ರಕಾಂತ್, ತೆಂಕನಿಡಿಯೂರು ಪಂಚಾಯತ್ ಮಾಜಿ ಸದಸ್ಯ ಶರತ್ ಶೆಟ್ಟಿ ಹಾಗೂ ಮಲ್ಪೆಯ ಮೀನುಗಾರ ಉದ್ಯಮಿ ಪ್ರಭಾಕರ್ ಕೋಟ್ಯಾನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

More like this
Related

ಆಡು ಮುಟ್ಟದ ಸೊಪ್ಪಿಲ್ಲ, ಕೇರಳಿಗರು ಮೆಟ್ಟದ ಮಣ್ಣಿಲ್ಲ: ಯಶ್ಪಾಲ್ ಸುವರ್ಣ

ಉಡುಪಿ: ಕೇರಳಿಗರು ಬುದ್ಧಿವಂತರು, ಸಂಸ್ಕಾರವಂತರು ಹಾಗೂ ವಿದ್ಯಾವಂತರಾಗಿದ್ದು, ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ...

ಶಾರ್ಜಾದಲ್ಲಿ ಹತ್ಯೆಗೀಡಾದ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ಹುಟ್ಟೂರಿಗೆ: ಕುಂದಾಪುರದಲ್ಲಿ ಅಂತ್ಯಕ್ರಿಯೆ

ಕುಂದಾಪುರ: ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ನಿಗೂಢವಾಗಿ ಹತ್ಯೆಯಾದ ಕುಂದಾಪುರದ ಪುರಸಭೆ ವ್ಯಾಪ್ತಿಯ...

‘ಚುಂಬಕ್’ ಶೂಟಿಂಗ್ ವೇಳೆ ನಿರ್ಮಾಪಕರ ವರ್ತನೆಯಿಂದ ಪ್ರಭಾವಿತನಾದ ಅನುಭವ ಹಂಚಿಕೊಂಡ ಹಿರಿಯ ನಟಿ

ಮುಂಬೈ, : ಇತ್ತೀಚೆಗೆ ಬಿಡುಗಡೆಯಾದ ನೆಟ್‌ಫ್ಲಿಕ್ಸ್‌ ಸ್ಟ್ರೀಮಿಂಗ್ ಶೋ **‘ಚುಂಬಕ್’**ನಲ್ಲಿ ತಮ್ಮ...

Copying is disabled on Udupi Digital News.