Monday, September 14, 2026

ಫಿಫಾ ವಿಶ್ವಕಪ್ ಸೆಮಿಫೈನಲ್: ಇಂದು ಫ್ರಾನ್ಸ್-ಸ್ಪೇನ್ ಮಹಾಸಮರ

ಟೆಕ್ಸಾಸ್: ಎರಡು ಬಾರಿ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿರುವ ಫ್ರಾನ್ಸ್ ಹಾಗೂ 2010ರ ವಿಶ್ವಕಪ್ ವಿಜೇತ ಸ್ಪೇನ್ ತಂಡಗಳು ಬುಧವಾರ ಟೆಕ್ಸಾಸ್‌ನ ಆರ್ಲಿಂಗ್ಟನ್‌ನ ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್-2026ರ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಫೈನಲ್‌ಗೆ ಪ್ರವೇಶಿಸಿ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಇಡಲಿದೆ.

ಫ್ರಾನ್ಸ್ ಸತತ ಮೂರನೇ ಬಾರಿಗೆ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸುವ ಕನಸಿನಲ್ಲಿದೆ. ಆದರೆ ಎದುರಾಳಿ ಯುರೋ ಚಾಂಪಿಯನ್ ಸ್ಪೇನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಕಠಿಣ ಸವಾಲು ನೀಡುವ ನಿರೀಕ್ಷೆಯಿದೆ.

ಡಿಡಿಯರ್ ಡೆಶಾಂಪ್ಸ್ ಮಾರ್ಗದರ್ಶನದ ಫ್ರಾನ್ಸ್ ತಂಡ ಗುಂಪು ಹಂತದಲ್ಲಿ ಸೆನೆಗಲ್, ಇರಾಕ್ ಹಾಗೂ ನಾರ್ವೆ ವಿರುದ್ಧ ಸತತ ಮೂರು ಗೆಲುವು ದಾಖಲಿಸಿ ಅಗ್ರಸ್ಥಾನ ಪಡೆದುಕೊಂಡಿತು. ನಂತರ ರೌಂಡ್ ಆಫ್-32ರಲ್ಲಿ ಸ್ವೀಡನ್ ತಂಡವನ್ನು ಸುಲಭವಾಗಿ ಮಣಿಸಿತು.

ರೌಂಡ್ ಆಫ್-16ರಲ್ಲಿ ಪ್ಯಾರಾಗ್ವೆ ವಿರುದ್ಧ ಕಠಿಣ ಹೋರಾಟದ ಬಳಿಕ ಗೆಲುವು ಸಾಧಿಸಿದ ಫ್ರಾನ್ಸ್, ಕ್ವಾರ್ಟರ್ ಫೈನಲ್‌ನಲ್ಲಿ ಮೊರೊಕ್ಕೊ ವಿರುದ್ಧ ಪ್ರಭಾವಿ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿತು.

ಇನ್ನೊಂದೆಡೆ ಸ್ಪೇನ್ ತನ್ನ ಮೊದಲ ಗುಂಪು ಪಂದ್ಯದಲ್ಲಿ ಕೇಪ್ ವರ್ಡೆ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಅಚ್ಚರಿ ಮೂಡಿಸಿತ್ತು. ಬಳಿಕ ಸೌದಿ ಅರೇಬಿಯಾ ಮತ್ತು ಉರುಗ್ವೆ ವಿರುದ್ಧ ಗೆದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ರೌಂಡ್ ಆಫ್-32ರಲ್ಲಿ ಆಸ್ಟ್ರಿಯಾವನ್ನು ಮಣಿಸಿದ ಸ್ಪೇನ್, ರೌಂಡ್ ಆಫ್-16 ಹಾಗೂ ಕ್ವಾರ್ಟರ್ ಫೈನಲ್‌ನಲ್ಲಿ ಕೊನೆಯ ಕ್ಷಣದ ಗೋಲುಗಳ ನೆರವಿನಿಂದ ಕ್ರಮವಾಗಿ ಪೋರ್ಚುಗಲ್ ಹಾಗೂ ಬೆಲ್ಜಿಯಂ ವಿರುದ್ಧ ಜಯಗಳಿಸಿ ಸೆಮಿಫೈನಲ್‌ಗೆ ತಲುಪಿದೆ.

ಫ್ರಾನ್ಸ್ ತಂಡ

ಗೋಲ್‌ಕೀಪರ್‌ಗಳು:
ಮೈಕ್ ಮೈಗ್ನಾನ್, ರಾಬಿನ್ ರಿಸರ್, ಬ್ರೈಸ್ ಸಾಂಬಾ

ರಕ್ಷಣಾ ಆಟಗಾರರು:
ಲೂಕಾಸ್ ಡಿಗ್ನೆ, ಮಾಲೋ ಗುಸ್ಟೋ, ಲೂಕಾಸ್ ಹೆರ್ನಾಂಡೆಸ್, ಥಿಯೋ ಹೆರ್ನಾಂಡೆಸ್, ಇಬ್ರಾಹಿಮಾ ಕೊನಾಟೆ, ಜುಲ್ಸ್ ಕುಂಡೆ, ಮ್ಯಾಕ್ಸೆನ್ಸ್ ಲಾಕ್ರೊಯಿಕ್ಸ್, ವಿಲಿಯಂ ಸಲಿಬಾ, ಡಯೋಟ್ ಉಪಮೆಕಾನೊ

ಮಿಡ್‌ಫೀಲ್ಡರ್‌ಗಳು:
ಎನ್’ಗೋಲೊ ಕಾಂಟೆ, ಮನು ಕೋನೆ, ಅಡ್ರಿಯನ್ ರಾಬಿಯೊ, ಔರೆಲಿಯನ್ ಷುವಾಮೆನಿ, ವಾರನ್ ಜೈರ್-ಎಮೆರಿ

ಫಾರ್ವರ್ಡ್‌ಗಳು:
ಮಾಗ್ನೆಸ್ ಅಕ್ಲಿಯೂಷೆ, ಬ್ರಾಡ್ಲಿ ಬಾರ್ಕೋಲಾ, ರಾಯನ್ ಚೆರ್ಕಿ, ಉಸ್ಮಾನ್ ಡೆಂಬೆಲೆ, ಡಿಸೈರ್ ಡುವೆ, ಜೀನ್-ಫಿಲಿಪ್ ಮಟೇಟಾ, ಕೈಲಿಯನ್ ಎಂಬಾಪೆ, ಮೈಕಲ್ ಒಲೀಸೆ, ಮಾರ್ಕಸ್ ತುರಾಮ್

ಸ್ಪೇನ್ ತಂಡ

ಗೋಲ್‌ಕೀಪರ್‌ಗಳು:
ಉನೈ ಸಿಮೋನ್, ಡೇವಿಡ್ ರಾಯಾ, ಜೋನ್ ಗಾರ್ಸಿಯಾ

ರಕ್ಷಣಾ ಆಟಗಾರರು:
ಪೆಡ್ರೊ ಪೊರೊ, ಮಾರ್ಕೋಸ್ ಲೊರೆಂಟೆ, ಆಯ್ಮೆರಿಕ್ ಲಾಪೋರ್ಟೆ, ಪೌ ಕುಬಾರ್ಸಿ, ಮಾರ್ಕ್ ಪಬಿಲ್, ಎರಿಕ್ ಗಾರ್ಸಿಯಾ, ಮಾರ್ಕ್ ಕುಕುರೇಲ್ಲಾ, ಅಲೆಜಾಂಡ್ರೊ ಗ್ರಿಮಾಲ್ಡೊ

ಮಿಡ್‌ಫೀಲ್ಡರ್‌ಗಳು:
ರೊಡ್ರಿಗೊ ಹೆರ್ನಾಂಡೆಸ್, ಮಾರ್ಟಿನ್ ಜುಬಿಮೆಂಡಿ, ಪೆಡ್ರಿ ಗೋನ್ಸಾಲೆಜ್, ಫಾಬಿಯನ್ ರೂಯಿಸ್, ಮಿಕೆಲ್ ಮೆರಿನೊ, ಗಾವಿ, ಅಲೆಕ್ಸ್ ಬಯೆನಾ

ಫಾರ್ವರ್ಡ್‌ಗಳು:
ಮಿಕೆಲ್ ಒಯಾರ್ಜಬಲ್, ಲಮಿನ್ ಯಮಾಲ್, ಫೆರಾನ್ ಟೊರೆಸ್, ಬೋರ್ಜಾ ಇಗ್ಲೆಸಿಯಾಸ್, ಡಾನಿ ಓಲ್ಮೊ, ವಿಕ್ಟರ್ ಮುನೊಜ್, ನಿಕೋ ವಿಲಿಯಮ್ಸ್, ಯೆರೆಮಿ ಪಿನೊ.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.