Monday, April 20, 2026

ಹಡಗು ವಶಕ್ಕೆ ಪ್ರತೀಕಾರ: ಅಮೆರಿಕಾ ನೌಕಾಪಡೆ ಮೇಲೆ ಇರಾನ್ ಡ್ರೋನ್ ದಾಳಿ

ಯುಡಿ ನ್ಯೂಸ್ ಡಾಟ್ ಕಾಮ್

ಅಮೆರಿಕಾ:
ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಅಮೆರಿಕಾ ಸೇನೆ ಇರಾನ್ ಧ್ವಜದ ಸರಕು ಹಡಗನ್ನು ವಶಪಡಿಸಿಕೊಂಡ ಬೆನ್ನಲ್ಲೇ ಇರಾನ್ ಡ್ರೋನ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

ಓಮನ್ ಸಮುದ್ರ ಹಾಗೂ ಹಾರ್ಮುಜ್ ಜಲಸಂಧಿ ಸುತ್ತಲಿನ ಪ್ರದೇಶದಲ್ಲಿ ಅಮೆರಿಕಾ ನೌಕಾಪಡೆಯ ಯುದ್ಧ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಡ್ರೋನ್‌ ದಾಳಿ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ವರದಿಗಳ ಪ್ರಕಾರ, ಅಮೆರಿಕಾ ನೌಕಾಪಡೆ ಇತ್ತೀಚೆಗೆ ಇರಾನ್ ಹಡಗನ್ನು ತಡೆದು ಅದರ ಎಂಜಿನ್ ಭಾಗಕ್ಕೆ ದಾಳಿ ನಡೆಸಿ ವಶಪಡಿಸಿಕೊಂಡಿತ್ತು. ಈ ಕ್ರಮವನ್ನು ಇರಾನ್ “ಸಮುದ್ರ ದರೋಡೆ” ಎಂದು ಕರೆದಿದ್ದು, ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇರಾನ್ ಸೇನೆ ಡ್ರೋನ್ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಇರಾನ್ ರೆವಲ್ಯೂಷನರಿ ಗಾರ್ಡ್ (IRGC) ಈ ದಾಳಿಯನ್ನು ಅಮೆರಿಕದ “ಪ್ರಚೋದನಾತ್ಮಕ ಕ್ರಮಕ್ಕೆ ಪ್ರತಿಕ್ರಿಯೆ” ಎಂದು ಹೇಳಿದೆ. ನಮ್ಮ ಹಡಗನ್ನು ವಶಪಡಿಸಿಕೊಂಡಿರುವುದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಆರೋಪಿಸಿರುವ ಇರಾನ್, ಈ ರೀತಿಯ ಕ್ರಮನನ್ನು ಅಮೆರಿಕಾ ಮುಂದುವರೆಸಿದ್ದೇ ಆದರೆ, ಮತ್ತಷ್ಟು ತೀವ್ರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಅಮೆರಿಕಾ ಕಡೆಯಿಂದಲೂ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನ್ನ ನೌಕಾಪಡೆಗಳು ಎಚ್ಚರಿಕೆಯಲ್ಲಿ ಇವೆ ಎಂದು ತಿಳಿಸಿದೆ.

ಡ್ರೋನ್‌ಗಳನ್ನು ಬಹುಪಾಲು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಮೆರಿಕಾ ಮೂಲಗಳು ಹೇಳಿದ್ದರೂ, ಪೂರ್ಣ ಹಾನಿ ವಿವರಗಳು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಈ ಘಟನೆ ಹಾರ್ಮುಜ್ ಜಲಸಂಧಿಯಲ್ಲಿ ಈಗಾಗಲೇ ಅಸ್ಥಿರವಾಗಿದ್ದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಈ ಪ್ರದೇಶವು ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿದ್ದು, ಇಲ್ಲಿ ನಡೆಯುವ ಯಾವುದೇ ಸೇನಾ ಚಟುವಟಿಕೆಗಳು ನೇರವಾಗಿ ಜಾಗತಿಕ ಇಂಧನ ಮಾರುಕಟ್ಟೆಗೆ ಪರಿಣಾಮ ಬೀರುತ್ತವೆ.

ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹಡಗುಗಳ ಮೇಲೆ ದಾಳಿ ಮತ್ತು ಸಾಗಣೆ ಅಡಚಣೆಗಳು ಹೆಚ್ಚಾಗಿದ್ದು, ಅನೇಕ ವಾಣಿಜ್ಯ ಹಡಗುಗಳು ಮಾರ್ಗ ಬದಲಾಯಿಸಬೇಕಾದ ಸ್ಥಿತಿ ಉಂಟಾಗಿದೆ. ಇದರಿಂದ ತೈಲ ಬೆಲೆ ಏರಿಕೆ ಹಾಗೂ ಸರಬರಾಜು ಅಸ್ಥಿರತೆ ಭೀತಿ ಹೆಚ್ಚಿದೆ.

ರಾಜತಾಂತ್ರಿಕ ವಲಯಗಳು ಈ ಬೆಳವಣಿಗೆಯನ್ನು ಅತ್ಯಂತ ಅಪಾಯಕಾರಿ ಹಂತ ಎಂದು ವರ್ಣಿಸುತ್ತಿದ್ದು, ಸಣ್ಣ ಸೇನಾ ಕಾರ್ಯಾಚರಣೆ ಕೂಡ ದೊಡ್ಡ ಸಂಘರ್ಷಕ್ಕೆ ತಿರುಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿವೆ.

ಇರಾನ್-ಅಮೆರಿಕಾ ನಡುವೆ ಈಗಾಗಲೇ ಶಾಂತಿ ಮಾತುಕತೆಗಳು ಅಸ್ಥಿರವಾಗಿದ್ದು, ಇತ್ತೀಚಿನ ಘಟನೆಗಳು ಪ್ರಯತ್ನಗಳನ್ನೂ ಕೂಡ ಸಂಪೂರ್ಣ ಕುಸಿಯುವಂತೆ ಮಾಡಿದೆ.

More like this
Related

ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ: ಬಿಟ್ ಕಾಯಿನ್ ಹಗರಣದ ಲಿಂಕ್ ಕಾರಣ?

ಯುಡಿ ನ್ಯೂಸ್ ಡಾಟ್ ಕಾಮ್ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್...

ಕುಂದಾಪುರ: ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಬಿಡುಗಡೆ

ಮಾನವೀಯತೆ ಮೇಲೆ ಸಮಾಜ ಕಟ್ಟಬೇಕು: ಮಾಜಿ ಸಚಿವ ಕಿಮ್ಮನೆ ರತ್ನಾಕರ್ -...

ಪಂಜಾಬ್‌ ಕಿಂಗ್ಸ್‌ ಅಜೇಯ ಓಟ: ಪ್ರಿಯಾಂಶ್, ಕೊನೊಲಿ ಅಬ್ಬರಕ್ಕೆ ಲಕ್ನೋ ಧೂಳಿಪಟ

ಯುಡಿ ನ್ಯೂಸ್ ಡಾಟ್ ಕಾಮ್ಚಂಡೀಗಢ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆದ...

ತಪ್ಪಿದ ಬಹುದೊಡ್ಡ ದುರಂತ: ಹುಬ್ಬಳ್ಳಿ ತಲುಪಬೇಕಿದ್ದ ವಿಮಾನ ಆಗಸದಲ್ಲೇ ಸುತ್ತಾಡಿ ಬೆಂಗಳೂರಲ್ಲಿ ಲ್ಯಾಂಡ್

ಯುಡಿ ನ್ಯೂಸ್ ಡಾಟ್ ಕಾಮ್ಹುಬ್ಬಳ್ಳಿ: ತಾಂತ್ರಿಕ ದೋಷದಿಂದಾಗಿ ಏಕಾಏಕಿ ವೇಗದ ನಿಯಂತ್ರಣ...

Copying is disabled on Udupi Digital News.