Saturday, May 30, 2026

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ವಾಯುದಾಳಿ; ಕನಿಷ್ಠ 12 ಮಂದಿ ಸಾವು

ಕಾಬೂಲ್: ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಮೇಲೆ ವಾಯುದಾಳಿಯನ್ನು ನಡೆಸಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು Aljazeera ವರದಿ ಮಾಡಿದೆ.

ಇಸ್ಲಾಮಾಬಾದ್‌ನ ಶಿಯಾ ಮಸೀದಿ ಮೇಲೆ ಇತ್ತೀಚೆಗೆ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಇತ್ತೀಚಿನ ದಾಳಿಗಳ ಹಿನ್ನೆಲೆ ಹಿಂದಿನ ಸಶಸ್ತ್ರ ಗುಂಪುಗಳ ಶಿಬಿರಗಳು ಮತ್ತು ಅಡಗುತಾಣಗಳನ್ನು ಗುರಿಯಾಗಿಸಿ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ರವಿವಾರ ಪಾಕಿಸ್ತಾನದ ದಾಳಿಯನ್ನು ಖಂಡಿಸಿದೆ. ಗಡಿ ಪ್ರದೇಶಗಳಾದ ನಂಗರ್ಹಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಧಾರ್ಮಿಕ ಶಾಲೆ ಹಾಗೂ ಮನೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಆರೋಪಿಸಿದೆ. ಈ ದಾಳಿಗಳ ಪರಿಣಾಮವಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿ ಹಲವಾರು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

“ದೇಶದ ಸೇನೆಯು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಗೆ ಸೇರಿದ ಏಳು ಶಿಬಿರಗಳು ಮತ್ತು ಅಡಗುತಾಣಗಳ ಮೇಲೆ “ಗುಪ್ತಚರ ಆಧಾರಿತ, ಆಯ್ದ ಕಾರ್ಯಾಚರಣೆಗಳನ್ನು ನಡೆಸಲಾಗಿದೆ” ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದೆ.

More like this
Related

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಆಯ್ಕೆ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ...

ಐಪಿಎಲ್ 2026 ಫೈನಲ್: ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಕಾದಾಟ ಇಂದು;

ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು 2022ರ ಚಾಂಪಿಯನ್ ಗುಜರಾತ್ ಟೈಟನ್ಸ್ ನಡುವೆ...

ಕೇರಳದಲ್ಲಿ ಭಾರೀ ಡ್ರಗ್ಸ್ ಜಾಲ ಭೇದನೆ; ₹70 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ

ಆಪರೇಷನ್ ಚಕ್ರವ್ಯೂಹ’ ಅಡಿಯಲ್ಲಿ ಡಿಆರ್‌ಐ ಕಾರ್ಯಾಚರಣೆ; 24 ಕೆ.ಜಿ.ಗಿಂತ ಹೆಚ್ಚು ಮಾದಕ...

ಪತ್ನಿಯನ್ನು ಗಂಟೆಗಳ ಕಾಲ ‘ಕೋಳಿ’ ಭಂಗಿಯಲ್ಲಿ ನಿಲ್ಲಿಸಿ ಹಿಂಸೆ; ತಪ್ಪಿಸಿಕೊಂಡ ಬಳಿಕ ಚಾಕುವಿನಿಂದ ಇರಿದ ಪತಿ ಬಂಧನ

ಮುಂಬೈನಲ್ಲಿ ಅಮಾನುಷ ಘಟನೆ; ಪತ್ನಿಗೆ ಕತ್ತಿಯಿಂದ ಬೆದರಿಕೆ, ಆಸಿಡ್ ದಾಳಿ ಮಾಡುವುದಾಗಿ...

Copying is disabled on Udupi Digital News.