ಗೋಲ್ಡ್‌ಕೋಸ್ಟ್:1947–48ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯ ವೇಳೆ ಆಸ್ಟ್ರೇಲಿಯಾದ ಬ್ಯಾಟಿಂಗ್ ದಂತಕತೆ ಸರ್ ಡಾನ್ ಬ್ರಾಡ್ಮನ್ ಧರಿಸಿದ್ದ ಐತಿಹಾಸಿಕ ಬ್ಯಾಗಿ ಗ್ರೀನ್ ಕ್ಯಾಪ್ ಆನ್‌ಲೈನ್ ಹರಾಜು ತಾಣವಾದ ಲಾಯ್ಡ್ ಬಿಡ್ಡಿಂಗ್ನಲ್ಲಿ ₹4.21 ಕೋಟಿ ರೂ.ಗೆ ಹರಾಜಾಗಿದೆ.
ಆ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಡಾನ್ ಬ್ರಾಡ್ಮನ್ ಅವರು ಈ ಕ್ಯಾಪ್ ಅನ್ನು ಭಾರತದ ಕ್ರಿಕೆಟಿಗ ಶ್ರೀರಂಗ ವಾಸುದೇವ್ ಸೊಹೋನಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಸೊಹೋನಿ ಕುಟುಂಬದವರು ಈ ಅಮೂಲ್ಯ ಸ್ಮರಣಿಕೆಯನ್ನು ಕಳೆದ 75 ವರ್ಷಗಳ ಕಾಲ ಸಂರಕ್ಷಿಸಿಕೊಂಡು ಬಂದಿದ್ದು, ಇದೀಗ ಸಾರ್ವಜನಿಕ ಹರಾಜಿಗೆ ಇಡಲಾಗಿದೆ.
ಹರಾಜಿನಲ್ಲಿ ಈ ಕ್ಯಾಪ್‌ಗೆ ಭಾರೀ ಸ್ಪರ್ಧೆ ಎದುರಾದರೂ, ಅದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ವಿವರಗಳನ್ನು ಆಯೋಜಕರು ಬಹಿರಂಗಪಡಿಸಿಲ್ಲ.
ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಸ್ಮರಣಿಕೆಯಾಗಿರುವ ಈ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿನಲ್ಲಿ ದಾಖಲೆ ಬೆಲೆ ತಲುಪಿರುವುದು ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ.




