ಬೆಂಗಳೂರು: ರಾಜಧಾನಿಯ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಪದವಿಧರರಿಗೆ ಭರ್ಜರಿ ಉದ್ಯೋಗಾವಕಾಶ; ಅದರಂತೆ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಖಾಲಿ ಇರುವ ಉಪ ಪ್ರಧಾನ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆ ಸುರಕ್ಷತೆ) – 1
ಸೂಪರ್‌ವೈಸರ್ (ಆಪರೇಷನ್ ಸೇಫ್ಟಿ) – 2
ಸಂಬಳ:
ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ 1.64 ಲಕ್ಷ
ಆಪರೇಷನ್ ಸೇಫ್ಟಿ ಸೂಪರ್‌ವೈಸರ್ ಹುದ್ದೆಗೆ ₹50,000 ರಿಂದ ₹62,500
ಅರ್ಹತೆ:
ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಇದರೊಂದಿಗೆ ಕನಿಷ್ಠ 14 ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು. ಇದರಲ್ಲಿ ಕನಿಷ್ಠ 8 ವರ್ಷಗಳ ಅನುಭವವು ಮೆಟ್ರೋ ರೈಲು ಅಥವಾ ಭಾರತೀಯ ರೈಲ್ವೆಯಲ್ಲಿ ರೈಲು ಕಾರ್ಯಾಚರಣೆ ಹಾಗೂ ಭದ್ರತಾ ವಿಭಾಗದಲ್ಲಿರುವುದು ಕಡ್ಡಾಯವಾಗಿದೆ.
ಆಪರೇಷನ್ ಸೇಫ್ಟಿ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಇದರೊಂದಿಗೆ ಭಾರತೀಯ ರೈಲ್ವೆಯಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಅಥವಾ ಸ್ಟೇಷನ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ವಯೋಮಿತಿ:
ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆ: ಒಪ್ಪಂದದ ಆಧಾರದ ಮೇಲೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 56 ವರ್ಷ ಹಾಗೂ ಡೆಪ್ಯುಟೇಶನ್ ಅಭ್ಯರ್ಥಿಗಳಿಗೆ 48 ವರ್ಷ ನಿಗದಿಪಡಿಸಲಾಗಿದೆ (ನಿವೃತ್ತ ಅಧಿಕಾರಿಗಳಿಗೆ 62 ವರ್ಷ).
ಸೂಪರ್‌ವೈಸರ್ (ಆಪರೇಷನ್ ಸೇಫ್ಟಿ): ಗರಿಷ್ಠ ವಯೋಮಿತಿ 62 ವರ್ಷ
ಯಾವುದೇ ಪರೀಕ್ಷೆಯಿಲ್ಲದೆ ಸರ್ಕಾರಿ ಕೆಲಸ: KSMCಯಲ್ಲಿ ಭರ್ಜರಿ ಉದ್ಯೋಗಾವಕಾಶ; ಸಂಬಳ 50,000 ರೂ
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ:
ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆ ಸುರಕ್ಷತೆ) – ಆನ್‌ಲೈನ್ ಅರ್ಜಿಯನ್ನು ಆಗಸ್ಟ್ 10, 2026 ರೊಳಗಡೆ ಸಲ್ಲಿಸಿ ಅದರ ಪ್ರಿಂಟ್‌ಔಟ್ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 13, 2026ರ ಸಂಜೆ 04:00 ಗಂಟೆಯೊಳಗೆ ನಮ್ಮ ಮೆಟ್ರೋ ಪ್ರಧಾನ ಕಚೇರಿಗೆ ತಲುಪಿಸಬೇಕು.
ಸೂಪರ್‌ವೈಸರ್ (ಆಪರೇಷನ್ ಸೇಫ್ಟಿ) – ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರಿಂಟ್‌ಔಟ್ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ 31 ಜುಲೈ 2026 ಸಂಜೆ 04:00 ಗಂಟೆಯೊಳಗೆ ನಮ್ಮ ಮೆಟ್ರೋ ಪ್ರಧಾನ ಕಚೇರಿಗೆ ತಲುಪಿಸಬೇಕು.
ದಾಖಲೆಗಳನ್ನು ಸಲ್ಲಿಸುವ ವಿಳಾಸ:
ಜನರಲ್ ಮ್ಯಾನೇಜರ್ (HR), BMRCL, ಶಾಂತಿನಗರ, ಬೆಂಗಳೂರು ಇವರ ಕಚೇರಿಗೆ ತಲುಪಿಸಬೇಕು.
KFWCCF ನೇಮಕಾತಿ 2026: ಅರಣ್ಯ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆಯೆ ನೇರ ಕೆಲಸ; ₹70,000 ಸಂಬಳ!
ಅಧಿಸೂಚನೆ:
- ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆ ಸುರಕ್ಷತೆ):https://www.bmrc.co.in:8282/Kannada/uploads/career/kannada//fileuploads/1784022378259$@!!DGM%20(Operation%20Safety).pdf
- ಸೂಪರ್‌ವೈಸರ್ (ಆಪರೇಷನ್ ಸೇಫ್ಟಿ): https://www.bmrc.co.in:8282/Kannada/uploads/career/kannada//fileuploads/1783427273097$@!!Supervisor%20(Operation%20Safety)-2%20Posts%20updated%20on%2001-06-26.pdf
ಅರ್ಜಿ ಲಿಂಕ್:
ಸೂಪರ್‌ವೈಸರ್ (ಆಪರೇಷನ್ ಸೇಫ್ಟಿ): https://projectrecruit.bmrc.co.in/frmApplFillTab.aspx?ND=115
ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆ ಸುರಕ್ಷತೆ): https://projectrecruit.bmrc.co.in/frmApplFillTab.aspx?ND=116




