Sunday, October 25, 2026

ʼಸ್ಟಿಂಗ್ ಆಪರೇಷನ್ʼ ಮಂಗಳೂರಿನ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಮಾಡಿರುವುದು : ಸಿದ್ದರಾಮಯ್ಯ

ಮೈಸೂರು: ಸ್ಟಿಂಗ್ ಆಪರೇಷನ್ ಎನ್ನುವುದು ಸುಳ್ಳು, ಇದೊಂದು ಕಟ್ಟುಕಥೆ, ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಹೀಗೆ ಮಾಡಲಾಗಿದೆ. ಹಾಗಾಗಿ ಸತ್ಯ ಹೊರಗಡೆ ಬರಲಿ ಎಂದು ನಾನೇ ಖುದ್ದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಶುಕ್ರವಾರ ತಮ್ಮ ಪುತ್ರ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಜೊತೆಗೆ ಆಗಮಿಸಿದ ಅವರು ಸುತ್ತೂರು ಶ್ರಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಕೃಪಾ ಆಳ್ವಾ ಮತ್ತು ರಾಕೇಶ್ ಶೆಟ್ಟಿ ಜೊತೆ ಮಾತನಾಡಿರುವ ವೀಡಿಯೋ ವೈರಲ್ ಮಾಡಲಾಗಿದೆ. ರಾಕೇಶ್ ಶೆಟ್ಟಿ ಸ್ಟಿಂಗ್ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.‌ ಹಾಗಾಗಿ ಇದರಲ್ಲಿ ಸತ್ಯಾಂಶ ಇಲ್ಲ ಎಂದರು.

ಸ್ಟಿಂಗ್ ಆಪರೇಷನ್ ಎನ್ನುವುದು ಸುಳ್ಳು, ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಹೀಗೆ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕು. ಇದು ಸುಳ್ಳು ಕೇಸು ಎಂಬುದು ಗೊತ್ತಾಗಲಿ ಎಂದು ನಾನೇ ದೂರು ನೀಡಿದ್ದೇನೆ. ಇದು ಹೆಚ್ಚು ಪ್ರಚಾರ ಆಗಬಾರದು ಎಂದು ಸಿವಿಲ್ ನ್ಯಾಯಾಲಯಕ್ಕೆ ಹೋಗಿ ತಡೆ ತಂದಿದ್ದೇನೆ ಎಂದು ಹೇಳಿದರು.

ನಾನು ಎಂಟು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. ಆವಾಗ ಈ ರೀತಿ ಯಾವುದನ್ನು ಮಾಡಲಿಲ್ಲ, ಈಗ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಿಮ್ಮ ಪರವಾಗಿ ಮಾತನಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನನ್ನ ಪರ ಯಾರೂ ನಿಲ್ಲಬೇಕಿಲ್ಲ, ರಾಜ್ಯದ ಜನರ ಸತ್ಯಾಂಶ ಗೊತ್ತಾಗಬೇಕು, ಇದು ಸುಳ್ಳು ಕೇಸ್ ಎಂಬುದು ಗೊತ್ತಾಗಬೇಕು ಎಂದು ತಿಳಿಸಿದರು.

ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಬೇಕು ಎಂದು ಯಾರೇ ಪ್ರಯತ್ನ ಪಟ್ಟರೂ ರಾಜ್ಯದ ಜನ ನಂಬಲ್ಲ, ಈಗಾಗಲೇ ತನಿಖೆ ನಡೆಯುತ್ತಿದೆ. ನಿಷ್ಪಕ್ಷ ತನಿಖೆಯಾಗಬೇಕು ಎಂದು ಒತ್ತಾಯ ಮಾಡುತ್ತೇನೆ. ಉನ್ನತಮಟ್ಟದ ತನಿಖೆ ಆಗತ್ಯವಿಲ್ಲ ಎಂದರು.

ಸ್ಟಿಂಗ್ ಆಪರೇಷನ್ ಹಿಂದೆ ನಮ್ಮ ಪಕ್ಷದವರು ಇದ್ದಾರಾ, ಬೇರೆ ಪಕ್ಷದವರು ಇದ್ದಾರಾ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕು. ತನಿಖೆ ನಡೆಯುತ್ತಿದೆ ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಹೇಳಿದರು.

ಸ್ಟಿಂಗ್ ಆಪರೇಷನ್ ವಿಚಾರ ವೀಡಿಯೊ ಹೊರ ಬಂದಾಗ ಸೆಪ್ಟಂಬರ್ 26 ರಂದು ನನ್ನ ಗಮನಕ್ಕೆ ಬಂತು. ನಾನೂ ತಪ್ಪೇ ಮಾಡಿಲ್ಲ ಎಂದ ಮೇಲೆ ನನಗೆ ಯಾಕೆ ಬೇಸರ ಆಗಲಿದೆ? ಸಂಪೂರ್ಣ ಸುಳ್ಳು, ಸಂಪೂರ್ಣ ಕಟ್ಟುಕಥೆ, ಇದು ನಡೆದೇ ಇಲ್ಲ ಎಂದ ಮೇಲೆ ನನಗೆ ಹೇಗೆ ತೇಜೋವಧೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

More like this
Related

ಪೋಸ್ಟರ್‌ಗಳ ಬದಲು ಅಭಿವೃದ್ಧಿ ಕಾರ್ಯಗಳನ್ನು ತೋರಿಸುವ ರಾಜಕೀಯ ಸಂಸ್ಕೃತಿ ಬರಲಿ: ಅಣ್ಣಾಮಲೈ

ಉಡುಪಿ: ಪಕ್ಷದ ಕಾರ್ಯಕರ್ತರು ‘ಮುಖ್ಯಮಂತ್ರಿ ಬರುತ್ತಿದ್ದಾರೆ’ ಎಂಬ ಪೋಸ್ಟರ್‌ಗಳನ್ನು ಹಾಕುವುದಕ್ಕಿಂತ, ತಮ್ಮ...

ಹಿರಿಯಡ್ಕದಲ್ಲಿ ಮನೆಕಳವು ಪ್ರಕರಣ: ಹೋಮ್ ನರ್ಸ್ ಬಂಧನ, ₹1.85 ಲಕ್ಷ ಮೌಲ್ಯದ ಚಿನ್ನ ವಶ

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಗ್ರಾಮದಲ್ಲಿ ವೃದ್ಧೆಯೊಬ್ಬರ ಗಮನ...

ಉಡುಪಿಯಲ್ಲಿ ತಾಯಿ ಹಾಗೂ ಮೂರು ವರ್ಷದ ಮಗು ನಾಪತ್ತೆ

ಉಡುಪಿ : ನಗರದ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ 29...

ಅಮೆರಿಕದಲ್ಲಿ ತೆಲಂಗಾಣ ಮೂಲದ ಮಹಿಳೆ ಮೃತ್ಯು

ನ್ಯೂಯಾರ್ಕ್: 25 ವರ್ಷದ ತೆಲಂಗಾಣ ಮೂಲದ ಮಹಿಳೆಯೊಬ್ಬರು ಹೃದಯ ಸ್ತಂಭನದಿಂದ ಮೃತಪಟ್ಟಿರುವ...

Copying is disabled on Udupi Digital News.