Saturday, May 30, 2026

ಹೊಸಕೋಟೆ | ನಾಲ್ವರು ಕಾರ್ಮಿಕರು ಮಲಗಿದ್ದಲ್ಲೇ ಮೃತ್ಯು; ಗ್ಯಾಸ್​ ಸೋರಿಕೆ ಶಂಕೆ

ಹೊಸಕೋಟೆ : ನಾಲ್ವರು ಕಾರ್ಮಿಕರು ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿರುವಂತಹ ಘಟನೆ ಸೂಲಿಬೆಲೆ ಪೊಲೀಸ್​ ಠಾಣಾ ವ್ಯಾಪ್ತಿಯ ಮುತ್ಸಂದ್ರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಮೃತರನ್ನು ಅಸ್ಸಾಂ ಮೂಲದ ಜಯಂತ್ ಸಿಂಧೆ ಬಿನ್ ಕೋಗೇಶ್ವರ(25), ನೀರೇಂದ್ರನಾಥ್ ಟೈಡ್ (24), ಡಾಕ್ಟರ್ ಟೈಡ್ (25) ಹಾಗೂ ಧನಂಜಯ್ ಟೈಡ್ (20) ಎಂದು ತಿಳಿದು ಬಂದಿದೆ.

ಮೃತ ಕಾರ್ಮಿಕರು ಮುತ್ಸಂದ್ರ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಲೇಬರ್ ಶೆಡ್​ನಲ್ಲಿ ಬಾಡಿಗೆಗೆ ವಾಸವಾಗಿದ್ದರು.

ಘಟನೆ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಮಿಕರು ಮೇಲ್ನೋಟಕ್ಕೆ ಗ್ಯಾಸ್​ ಸೋರಿಕೆಯಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

More like this
Related

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಆಯ್ಕೆ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ...

ಐಪಿಎಲ್ 2026 ಫೈನಲ್: ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಕಾದಾಟ ಇಂದು;

ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು 2022ರ ಚಾಂಪಿಯನ್ ಗುಜರಾತ್ ಟೈಟನ್ಸ್ ನಡುವೆ...

ಕೇರಳದಲ್ಲಿ ಭಾರೀ ಡ್ರಗ್ಸ್ ಜಾಲ ಭೇದನೆ; ₹70 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ

ಆಪರೇಷನ್ ಚಕ್ರವ್ಯೂಹ’ ಅಡಿಯಲ್ಲಿ ಡಿಆರ್‌ಐ ಕಾರ್ಯಾಚರಣೆ; 24 ಕೆ.ಜಿ.ಗಿಂತ ಹೆಚ್ಚು ಮಾದಕ...

ಪತ್ನಿಯನ್ನು ಗಂಟೆಗಳ ಕಾಲ ‘ಕೋಳಿ’ ಭಂಗಿಯಲ್ಲಿ ನಿಲ್ಲಿಸಿ ಹಿಂಸೆ; ತಪ್ಪಿಸಿಕೊಂಡ ಬಳಿಕ ಚಾಕುವಿನಿಂದ ಇರಿದ ಪತಿ ಬಂಧನ

ಮುಂಬೈನಲ್ಲಿ ಅಮಾನುಷ ಘಟನೆ; ಪತ್ನಿಗೆ ಕತ್ತಿಯಿಂದ ಬೆದರಿಕೆ, ಆಸಿಡ್ ದಾಳಿ ಮಾಡುವುದಾಗಿ...

Copying is disabled on Udupi Digital News.