Saturday, May 30, 2026

ನನ್ನ ಊಟದ ಬಗ್ಗೆ ನನ್ನನ್ನೇ ಕೇಳಿ, ಧರ್ಮ–ಸಮುದಾಯ ಎಳೆಯಬೇಡಿ: ಡಾಲಿ ಧನಂಜಯ್ ಆಕ್ರೋಶ

ಬೆಂಗಳೂರು: ನಟ ಡಾಲಿ ಧನಂಜಯ್ ಬಿರಿಯಾನಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜಾತಿ–ಸಮುದಾಯದ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ, ಈ ವಿಚಾರಕ್ಕೆ ಸಂಬಂಧಿಸಿದ ಟೀಕೆಗಳಿಗೆ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸ್ನೇಹಿತನ ಹೋಟೆಲ್ ಉದ್ಘಾಟನೆ ವೇಳೆ ಬಿರಿಯಾನಿ ಸೇವಿಸಿದ್ದನ್ನು ಲಿಂಗಾಯತ ಸಮುದಾಯದೊಂದಿಗೆ ತಳುಕು ಹಾಕಿ ಪ್ರಶ್ನಿಸಿರುವುದು ಬೇಸರ ತಂದಿದೆ ಎಂದು ಧನಂಜಯ್ ಹೇಳಿದ್ದಾರೆ. “ನಾನು ಏನು ತಿನ್ನುತ್ತೇನೆ ಅನ್ನೋದು ನನ್ನ ವೈಯಕ್ತಿಕ ವಿಚಾರ. ಧನಂಜಯ್ ನಾನ್‌ವೆಜ್ ತಿಂತಾರಾ ಎಂದು ಕೇಳೋದು ತಪ್ಪಲ್ಲ. ಆದರೆ ಲಿಂಗಾಯತರು, ಬ್ರಾಹ್ಮಣರೆಲ್ಲರೂ ಮಾಂಸ ತಿಂತಾರಾ ಎಂದು ಸಮುದಾಯವನ್ನೇ ಎಳೆದು ತರುವುದು ತಪ್ಪು” ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರರಂಗದಲ್ಲಿ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಚರ್ಚೆಯಾಗಬೇಕು, ವೈಯಕ್ತಿಕ ಆಹಾರ ಪದ್ಧತಿಯನ್ನು ಜಾತಿ–ಸಮುದಾಯದ ವಿಷಯವನ್ನಾಗಿ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಯಾವುದೇ ಅಭ್ಯಾಸ ಇತಿಮಿತಿಯಲ್ಲಿರಬೇಕು. ನನ್ನ ಆಹಾರದ ಆಯ್ಕೆಯಿಂದ ಬೇರೆ ಯಾರಿಗೂ ತೊಂದರೆಯಾಗದಿದ್ದರೆ ಅದು ತಪ್ಪಲ್ಲ” ಎಂದು ಡಾಲಿ ಧನಂಜಯ್ ಹೇಳಿದರು.

More like this
Related

ಕೇರಳದಲ್ಲಿ ಭಾರೀ ಡ್ರಗ್ಸ್ ಜಾಲ ಭೇದನೆ; ₹70 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ

ಆಪರೇಷನ್ ಚಕ್ರವ್ಯೂಹ’ ಅಡಿಯಲ್ಲಿ ಡಿಆರ್‌ಐ ಕಾರ್ಯಾಚರಣೆ; 24 ಕೆ.ಜಿ.ಗಿಂತ ಹೆಚ್ಚು ಮಾದಕ...

ಪತ್ನಿಯನ್ನು ಗಂಟೆಗಳ ಕಾಲ ‘ಕೋಳಿ’ ಭಂಗಿಯಲ್ಲಿ ನಿಲ್ಲಿಸಿ ಹಿಂಸೆ; ತಪ್ಪಿಸಿಕೊಂಡ ಬಳಿಕ ಚಾಕುವಿನಿಂದ ಇರಿದ ಪತಿ ಬಂಧನ

ಮುಂಬೈನಲ್ಲಿ ಅಮಾನುಷ ಘಟನೆ; ಪತ್ನಿಗೆ ಕತ್ತಿಯಿಂದ ಬೆದರಿಕೆ, ಆಸಿಡ್ ದಾಳಿ ಮಾಡುವುದಾಗಿ...

ಸುಮನಸಾ ರಜತ ಮಹೋತ್ಸವಕ್ಕೆ ಮೇ 31ರಂದು ಚಾಲನೆ

ಉಡುಪಿ: ಸಾಮಾಜಿಕ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಳೆದ 25...

ವರಾಹಿ ಮೂಲ ಯೋಜನೆ ಹಳ್ಳ ಹಿಡಿಯಲು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ : ಕೆ ವಿಕಾಸ್ ಹೆಗ್ಡೆ

ವಾರಾಹಿ ಯೋಜನೆ ವಿಳಂಬದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವ...

Copying is disabled on Udupi Digital News.