ಮಂಗಳೂರು: ನನಗೆ ಮುಖ್ಯಮಂತ್ರಿಯಾಗಲು ಅವಸರವಿಲ್ಲ. ಇನ್ನೂ ಇಪ್ಪತ್ತು ವರ್ಷ ಕಳೆಯಲಿ. ನನ್ನ ಕ್ಷೇತ್ರದಲ್ಲಿ ನನ್ನ ಮತದಾರರು ಇನ್ನೂ ನಾಲ್ಕು ಬಾರಿ ಗೆಲ್ಲಿಸಿ ಕಳುಹಿಸಿದ ಬಳಿಕ ನೋಡೋಣ ಎಂದು ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಬಳ್ಳಾರಿಯ ಗಲಭೆ ಪ್ರರಕಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ಗಲಾಟೆಯಾಗಿರುವುದು ಸರಿಯಲ್ಲ. ಎಲ್ಲರೂ ರಾಜಕೀಯ ಮಾಡಬೇಕು. ಆದರೆ ದ್ವೇಷದ ರಾಜಕಾರಣ ಮಾಡುವುದು ತಪ್ಪು. ಪರಸ್ಪರ ಏಕವಚನ ಬಳಕೆ ಕೂಡ ಸಮರ್ಥನೀಯವಲ್ಲ. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಾಧ್ಯಮಗಳ ಮುಂದೆ ಪರಸ್ಪರ ಏಕವಚನದಲ್ಲಿ ಬೈದಾಡಿಕೊಳ್ಳುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ಯುಟಿ ಖಾದರ್ ಅವರು, ಶಾಸಕರು ಸಿನಿಮೀಯ ಶೈಲಿಯಲ್ಲಿ ಕಚ್ಚಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದ್ವೇಷ ರಾಜಕಾರಣ ಒಳಿತಲ್ಲ:
ಬಳ್ಳಾರಿಯಲ್ಲಿ ಇಬ್ಬರೂ ಶಾಸಕರಾಗಿದ್ದಾರೆ. ರಾಜಕಾರಣ ಮಾಡಬೇಕು. ಆದರೆ ಸೀನಿಮಾ ರೀತಿಯಲ್ಲಿ ಕಚ್ಚಾಡುವುದು. ದ್ವೇಷದ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ಇಂತಹ ಘಟನೆಗಳು ಜನ ಪ್ರತಿನಿಧಿಗಳ ಮೇಲಿನ ಗೌರವವನ್ನು ಕಡಿಮೆ ಮಾಡುತ್ತವೆ. ಕೆಲವರ ನಡವಳಿಕೆಯಿಂದ ಎಲ್ಲಾ ರಾಜಕಾರಣಿಗಳಿಗೂ ಕಪ್ಪು ಚುಕ್ಕೆ ಬರುತ್ತದೆ ಎಂದು ಎಚ್ಚರಿಸಿದರು.




