Monday, July 6, 2026

ಬ್ರಹ್ಮಾವರದಲ್ಲಿ ಜೀಪು ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಬ್ರಹ್ಮಾವರ: ರಸ್ತೆ ದಾಟುತ್ತಿದ್ದ ವೇಳೆ ಜೀಪು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಉಪ್ಪೂರು ಗ್ರಾಮದ ಮೋಗವೀರ ಯುವ ಸಂಘಟನೆ ಬಸ್ ನಿಲ್ದಾಣದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಜುಲೈ 3ರಂದು ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಬರುತ್ತಿದ್ದ ಜೀಪು, ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ 4ರಂದು ಮುಂಜಾನೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More like this
Related

ಬ್ರಹ್ಮಾವರ: ಗಾಳಿ-ಮಳೆಗೆ ಶಾಲೆಯ ಹೆಂಚು ಕುಸಿದು ವಿದ್ಯಾರ್ಥಿನಿಗೆ ಗಾಯ

ಬ್ರಹ್ಮಾವರ: ಭಾರೀ ಗಾಳಿ-ಮಳೆಗೆ ಬ್ರಹ್ಮಾವರದ ಬೋರ್ಡ್ ಪ್ರೈಮರಿ ಶಾಲೆಯಲ್ಲಿ ಹೆಂಚು ಕುಸಿದು...

₹23 ಲಕ್ಷ ವಂಚನೆ ಪ್ರಕರಣ: ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಸಹಿತ ಇಬ್ಬರ ಬಂಧನ

ಉಡುಪಿ: ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಹಣವನ್ನು ದುರ್ಬಳಕೆ ಮಾಡಿಕೊಂಡು...

ಡಚ್ ಜೂನಿಯರ್ ಓಪನ್‌ ಅಂಡರ್-13 ಪ್ರಶಸ್ತಿ ಗೆದ್ದ ಭಾರತೀಯ ಪ್ರತಿಭೆ ಅಮಾರ್ಯ ಬಜಾಜ್

ಆಮ್‌ಸ್ಟರ್‌ಡ್ಯಾಮ್: ಭಾರತದ ಉದಯೋನ್ಮುಖ ಸ್ಕ್ವಾಶ್ ಆಟಗಾರ ಅಮಾರ್ಯ ಬಜಾಜ್ 2026ರ ಡಚ್...

ಸರ್ಕಾರಿ ಶಾಲೆಯ ಗೇಟ್ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ; ವಿದ್ಯಾರ್ಥಿನಿ ಗಂಭೀರ

ಬಲಕುಂದಿ: ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬಲಕುಂದಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ...

Copying is disabled on Udupi Digital News.