Friday, June 26, 2026

ಸಂಸದರು ವಾರಾಹಿ ನೀರಾವರಿ ಯೋಜನೆಯ ವಾಸ್ತವ ಅರಿತು ಮಾತನಾಡಲಿ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಸಿದ್ಧಾಪುರ ಗ್ರಾಮದ ಹೋರಿಯಬ್ಬೆಯಲ್ಲಿನ ವರಾಹಿ ಡೈವರ್ಶನ್ ವೀಯರ್ ಬಗ್ಗೆ ವಾಸ್ತವದ ಅರಿವಿಲ್ಲದೆ ಜನರನ್ನು ಮತ್ತು ಸರ್ಕಾರವನ್ನು ದಾರಿತಪ್ಪಿಸುತ್ತಿರುವ ಸಂಸದ ಬಿ. ವೈ. ರಾಘವೇಂದ್ರ ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ
.
ಮಾಣಿ ಜಲಾಶಯದಿಂದ ಹೊರಬಂದ ನೀರು ವರಾಹಿ ನದಿ ಮೂಲಕ ಸಿದ್ಧಾಪುರ ಗ್ರಾಮದ ಹೋರಿಯಬ್ಬೆಯಲ್ಲಿ ಶೇಖರಣೆಯಾಗುತ್ತದೆ. ಈ ಡೈವರ್ಶನ್ ವಿಯರ್ 1100 ಕ್ಯೂಸೆಕ್ಸ್ ನೀರು ಸಂಗ್ರಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಡೈವರ್ಶನ್ ವಿಯರ್ ನಿರ್ಮಾಣವಾಗಿರುವುದು ಕೇವಲ ವರಾಹಿ ನೀರಾವರಿ ಯೋಜನೆಯ ಎಡ ದಂಡೆ, ಬಲ ದಂಡೆ ಮತ್ತು ಏತ ನೀರಾವರಿಯ ಕಾಲುವೆಗಳಿಗೆ ನೀರುಣಿಸಲು, ಉಳಿದ ಎಲ್ಲಾ ಇತರೇ ಯೋಜನೆಗಳಿಗೆ ವರಾಹಿ ನದಿಯಿಂದಲೇ ನೀರನ್ನು ಎತ್ತಬೇಕು. ಆದರೆ ರೈತರ ಜೀವನಾಡಿಯಾದ ವರಾಹಿ ಡೈವರ್ಶನ್ ವಿಯರ್ ನಿಂದಲೇ ಸಿದ್ಧಾಪುರ ಏತ ನೀರಾವರಿ ಯೋಜನೆಗೆ ನೀರನ್ನು ಎತ್ತ ಬೇಕು ಎನ್ನುವ ಸಂಸದರ ಒತ್ತಾಯ ವರಾಹಿ ನದಿ ಪಾತ್ರದ ರೈತರ ಹಾಗೂ ವರಾಹಿ ನದಿ ನೀರನ್ನೇ ನಂಬಿ ಬದುಕುತ್ತಿರುವ ಕುಂದಾಪುರ ಪುರಸಭೆ ಹಾಗೂ ಸುಮಾರು ಹನ್ನೆರಡು ಗ್ರಾಮ ಪಂಚಾಯತುಗಳ ಜನಸಾಮಾನ್ಯರಿಗೆ ಮಾಡುತ್ತಿರುವ ದ್ರೋಹವಾಗಿದೆ.

ಸಂಸದರು ಹೇಳಿದಂತೆ ವರಾಹಿ ಡೈವರ್ಶನ್ ವಿಯರ್ ಪಕ್ಕದಲ್ಲೇ ಸಿದ್ಧಾಪುರ ಏತ ನೀರಾವರಿ ಯೋಜನೆಯ ಜಾಕ್ ವೆಲ್ ನಿರ್ಮಾಣವಾದರೆ ಡೈವರ್ಶನ್ ವಿಯರ್ ಗೆ ಅಪಾಯ ಕಟ್ಟಿಟ್ಟಬುತ್ತಿ. ಕುಂದಾಪುರ ತಾಲ್ಲೂಕು ರೈತ ಸಂಘ ಸಿದ್ಧಾಪುರ ಏತ ನೀರಾವರಿ ಯೋಜನೆ ಆದಷ್ಟು ಬೇಗ ಜಾರಿಯಾಗಲಿ ಎಂದು ಆಶಿಸುತ್ತದೆ ಆದರೆ ಈ ಯೋಜನೆಯ ಜಾಕ್ ವೆಲ್ ಮಾತ್ರ ವರಾಹಿ ನದಿ ಪಕ್ಕದಲ್ಲೇ ನಿರ್ಮಾಣವಾಗಬೇಕು ಇಲ್ಲದೆ ಇದ್ದರೆ ವರಾಹಿ ನದಿ ಪಾತ್ರದ ರೈತರು ಹಾಗೂ ಕುಡಿಯುವ ನೀರು ಬಳಕೆದಾರರನ್ನು ಸೇರಿಸಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.

More like this
Related

ಮಲ್ಪೆಯಲ್ಲಿ ಎಂ.ಡಿ.ಎಂ.ಎ ಮಾರಾಟ: ಯುವಕ ಬಂಧನ; ರೂ.1.52 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ...

ಕುಂದಾಪುರ ತಾಲೂಕು ಪತ್ರಕರ್ತರ ಸಂಘದಿಂದ ಎಸ್. ಜನಾರ್ದನ ಮರವಂತೆ ಅವರಿಗೆ ನುಡಿನಮನ

ಕುಂದಾಪುರ : ಪಂಚಾಯತ್ ರಾಜ್ ತಜ್ಞ, ಹಿರಿಯ ಪತ್ರಕರ್ತ ಎಸ್.ಜನಾರ್ದನ ಮರವಂತೆ...

“ಸಿಎಂ ಶಿವಕುಮಾರ್ ಜೊತೆ ನನಗೆ ಯಾವುದೇ ಸಂಬಂಧ ಇಲ್ಲ”: ಅಡ್ಡಮತದಾನ ವಿವಾದಕ್ಕೆ ತೆರೆ ಎಳೆಯಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಪಷ್ಟನೆ

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ (ಕ್ರಾಸ್‌ ವೋಟಿಂಗ್)...

ಜರ್ಮನಿಗೆ ಶಾಕ್ ನೀಡಿದ ಈಕ್ವೆಡಾರ್; 2-1 ಜಯದೊಂದಿಗೆ ನಾಕೌಟ್‌ಗೆ ಐತಿಹಾಸಿಕ ಪ್ರವೇಶ

ನ್ಯೂಜೆರ್ಸಿ ಸ್ಟೇಡಿಯಂ: ನಾಲ್ಕು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಜರ್ಮನಿಗೆ ಆಘಾತ...

Copying is disabled on Udupi Digital News.