ಯುಡಿ ನ್ಯೂಸ್ ಡಾಟ್ ಕಾಮ್
ಅಲಹಾಬಾದ್: ವಿಚ್ಛೇದನ ಪಡೆದ ಪತ್ನಿಯು ಪಡೆಯಬಹುದಾದ ಜೀವನಾಂಶ ಮೊತ್ತವು ಪತಿಯ ಆದಾಯದ ಶೇಕಡಾ 25 ರವರೆಗೆ ಇರಬಹುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ವಿಚ್ಛೇದನ ಪ್ರಕರಣದಲ್ಲಿ ಸುರೇಶ್ ಚಂದ್ರ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಪತ್ನಿಗೆ ನೀಡುವ ಜೀವನಾಂಶ ಮೊತ್ತವನ್ನು ಹೆಚ್ಚಿಸಿ ಉತ್ತರ ಪ್ರದೇಶದ ಶಹಜಹಾನ್ಪುರದ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.
ವಿಚ್ಛೇದನ ಪಡೆದ ಪತ್ನಿಗೆ ಜೀವನ ನಿರ್ವಹಣೆಗಾಗಿ ಪತಿಯು ತನ್ನ ಆದಾಯದ ಶೇಕಡಾ 25 ರಷ್ಟನ್ನು ನೀಡಬೇಕೆಂದು ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಸುರೇಶ್ ಚಂದ್ರ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮದನ್ಪಾಲ್ ಸಿಂಗ್ ಅವರಿದ್ದ ಪೀಠವು, ”ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ವಿಚ್ಛೇದಿತ ಪತ್ನಿಗೆ ಪತಿಯು ಜೀವನಾಂಶ ನೀಡುವುದು ಪವಿತ್ರ ಮತ್ತು ಕಾನೂನುಬದ್ಧ ಕರ್ತವ್ಯವಾಗಿದೆ,” ಎಂದು ಹೇಳಿದೆ.
ಅಲ್ಲದೇ, ಈ ಪ್ರಕರಣದಲ್ಲಿಅರ್ಜಿದಾರರು ತಾವು ವಿಶೇಷಚೇತನರು ಎಂದು ಹೇಳಿಕೊಂಡಿಲ್ಲ. ಆದ್ದರಿಂದ, ಅವರು ಆರೋಗ್ಯವಂತ ವ್ಯಕ್ತಿಯಾಗಿದ್ದು ಪತ್ನಿಯನ್ನು ಪೋಷಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲಎಂದೂ ಕೋರ್ಟ್ ಹೇಳಿದೆ.




