Monday, April 27, 2026

ಸಿಲಿಂಡರ್ ಸ್ಪೋಟ: ಹೊತ್ತಿ ಉರಿದ ಹೊಟೇಲ್‌

ಯುಡಿ ನ್ಯೂಸ್ ಡಾಟ್ ಕಾಮ್

ಬಳ್ಳಾರಿ: ಹೊಟೇಲ್‌ನಲ್ಲಿದ್ದ ಎರಡು ಸಿಲಿಂಡರ್ ಏಕಾಏಕಿ ಸ್ಪೋಟ ಆದ ಪರಿಣಾಮ ಹೊಟೇಲ್‌ ಹೊತ್ತಿ ಉರಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ.

ತೆಕ್ಕಲಕೋಟೆಯ ಈರಣ್ಣ ಎನ್ನುವವರಿಗೆ ಸೇರಿದ ಹೋಟೆಲ್‌ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಹೊಟೇಲ್‌ನಲ್ಲಿ ಈರಣ್ಣನ ಕುಟುಂಬಸ್ಥರು 9 ಜನ ಮಲಗಿದ್ದರು ಎನ್ನಲಾಗಿದೆ. 9 ಜನರ ಪೈಕಿ ಓರ್ವ ಬಾಲಕ ಗಾಯಗೊಂಡಿದ್ದಾನೆ. ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ 10 ವರ್ಷದ ಶ್ರೀನಿವಾಸ್‌ಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಬಾಲಕನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಉಳಿದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಹೊಟೇಲ್‌ನಲ್ಲಿನ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿದ್ದು, ಜೀವನೋಪಾಯಕ್ಕೆ ಇದ್ದ ಹೊಟೇಲ್‌ಗೆ ಬೆಂಕಿ ಬಿದ್ದಿದ್ದರಿಂದ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಸಿಲಿಂಡರ್ ಬ್ಲಾಸ್ಟ್ ಆದ ಹೊಟೇಲ್‌ನ ಅಕ್ಕಪಕ್ಕದ ಎರಡು ಮೂರು ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದ ಪರಿಣಾಮ, ಟೈಯರ್ ಅಂಗಡಿಯೂ ಹೊತ್ತಿ ಉರಿದಿದೆ. ಘಟನೆ ಸಂಬಂಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More like this
Related

ಹೀಟ್​ ವೇವ್​ ಅಬ್ಬರ: ದೇಶವನ್ನೇ ಸುಡುತ್ತಿದೆ ಬೆಂಕಿ ಬಿಸಿಲು!

ಯುಡಿ ನ್ಯೂಸ್ ಡಾಟ್ ಕಾಮ್ ನವದೆಹಲಿ: ಭಾರತದಲ್ಲಿ ಹೀಟ್​ ವೇವ್​ ಅಬ್ಬರ ದಿನದಿಂದ ದಿನಕ್ಕೆ...

ಇರಾನ್ ದಾಳಿ: ಇಸ್ರೇಲ್ ನೆರವು ಕೋರಿದ UAE!

ಯುಡಿ ನ್ಯೂಸ್ ಡಾಟ್ ಕಾಮ್ ಅಬುದಾಬಿ: ಗಲ್ಫ್ ದೇಶದ ಮೇಲೆ ಇರಾನ್ ದಾಳಿ ಮಾಡಿದ...

ರಿಂಕು, ನರೈನ್‌ ಮಿಂಚು: ಲಖನೌ ಎದುರು ಸೂಪರ್‌ ಓವರ್‌ ನಲ್ಲಿ ಗೆದ್ದು ಬೀಗಿದ ಕೋಲ್ಕತ್ತಾ

ಯುಡಿ ನ್ಯೂಸ್ ಡಾಟ್ ಕಾಮ್ ಲಖನೌ: ಭಾನುವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್...

ತೊಟ್ಟಂ ಚರ್ಚಿನಿಂದ ವರ್ಗಾವಣೆಗೊಂಡ ವಂ|ಡೆನಿಸ್ ಡೆಸಾ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಉಡುಪಿ: ಜಾತಿ ಧರ್ಮದ ಗೋಡೆಗಳನ್ನು ಕೆಡವಿ ಸರ್ವ ಜನಾಂಗದ ಶಾಂತಿಯ ತೋಟವನ್ನು...

Copying is disabled on Udupi Digital News.